ದೇಶ

ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಮುಂದಿನ ವಾರ ಬಾಲಾಪರಾಧಿ ಕುರಿತ ನಿರ್ಣಯ

Srinivasamurthy VN
ಶ್ರೀನಗರ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಅಪ್ರಾಪ್ತ ಆರೋಪಿ ಬಾಲಾಪರಾಧಿಯೋ ಅಥವಾ ಸಾಮಾನ್ಯ ಅಪರಾಧಿಯೋ ಎಂಬ ನಿರ್ಣಯವನ್ನು ಮುಂದಿನ ವಾರ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಹೇಳಿದೆ.
ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಖೆ ನಡೆಸುತ್ತಿರುವ ಅಪರಾಧ ತನಿಖೆ ವಿಭಾಗದ ಅಧಿಕಾರಿಗಳು ಪ್ರಕರಣದ ಇತರೆ ಏಳು ಆರೋಪಿಗಳೊಂದಿಗೆ ಈತನನ್ನೂ ಬಂಧಿಸಿದ್ದು, ಚಾರ್ಚ್ ಶೀಟ್ ನಲ್ಲಿ ಈತನ ವಯಸ್ಸನ್ನು 19ರಿಂದ 23 ವರ್ಷ ಎಂದು  ನಮೂದಿಸಲಾಗಿದೆ. ಹೀಗಾಗಿ ಈತನನ್ನು ಬಾಲಾಪರಾಧಿ ಕಾಯ್ದೆಯ ಅಡಿಯಲ್ಲಿ ವಿಚಾರಣೆ ನಡೆಸಬೇಕೇ ಅಥವಾ ಇತರೆ ಏಳು ಆರೋಪಿಗಳೊಂದಿಗೆ ಸಾಮಾನ್ಯ ಆರೋಪಿಯಾಗಿ ಪರಿಗಣಿಸಬೇಕು ಎಂಬ  ವಿಚಾರವನ್ನು ಉಭಯ ವಕೀಲರು ತಮ್ಮ ವಾದ ಮಂಡಿಸಿದ್ದರು. ಇದೀಗ ಈ ವಿಚಾರಣೆ ಪೂರ್ಣಗೊಂಡಿದ್ದು, ಮುಂದಿವಾರ ಕಾಶ್ಮೀರ ಹೈಕೋರ್ಟ್ ಶಂಕಿತ ಬಾಲಾಪರಾಧಿಯ ಭವಿಷ್ಯ ಬರೆ.ಲಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಅರೋಪಿಗಳ ವೈದ್ಯಕೀಯ ಪರೀಕ್ಷೆ ಕೂಡ ನಡೆಸಿದ್ದರು. ಇಲ್ಲಿಯೂ ವೈದ್ಯರು ಆತನ ಸ್ಪಷ್ಟ ವಯಸ್ಸು ಬರೆದಿರಲಿಲ್ಲ. ಹೀಗಾಗಿ ಗೊಂದಲಕ್ಕೆ ಕಾರಣವಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದ, ಆರೋಪಿಯ ವಯಸ್ಸಿನ ಕುರಿತು ಸ್ಪಷ್ಟತೆ ದೊರೆಯುವ ವರೆಗೂ ತನಿಖೆ ಸಂಪೂರ್ಣಗೊಳ್ಳುವುದು ಅಸಾಧ್ಯ ಎಂದು ಹೇಳಿದ್ದಾರೆ.
ಇನ್ನು ತಮ್ಮ ಪುತ್ರ ಯಾವುದೇ ತಪ್ಪು ಮಾಡಿಲ್ಲ. ಆತ ಅಪ್ರಾಪ್ತ ಎಂದು ಆರೋಪಿಸಿರುವ ಆತನ ಪೋಷಕರು ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಕಥುವಾ ಬಾರ್ ಅಸೋಸಿಯೇಷನ್ ಕೂಡ ಪ್ರಕರಣ ಸಂಬಂಧ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದು, ಆತ ಬಾಲಾಪರಾದಿಯೋ ಅಥವಾ ಇಲ್ಲವೋ ಎಂಬುದು ಸಾಬೀತಾದ ಬಳಿಕವಷ್ಚೇ ಚಾರ್ಜ್ ಶೀಟ್ ದಾಖಲಿಸಬೇಕು ಎಂದು ಕೋರ್ಟ್ ಗೆ ಮನವಿ ಮಾಡಿತ್ತು. 
ಕಳೆದ ಜನವರಿ 10ರಂದು 8 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು ಆಕೆಯ ಮೇಲೆ ನಿರಂತರ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು. 
SCROLL FOR NEXT