ದೇಶ

'ನಾನು ಬಿಜೆಪಿ ಜತೆ ಇಲ್ಲ. ಆದ್ರೆ ರಾಮನ ಜತೆ ಇದ್ದೇನೆ': ಮುಲಾಯಂ ಸೊಸೆ ಅಪರ್ಣ

Lingaraj Badiger
ಲಖನೌ: ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣ ಯಾದವ್ ಅವರು, 'ನಾನು ಬಿಜೆಪಿ ಜತೆ ಇಲ್ಲ. ಆದ್ರೆ ರಾಮನ ಜತೆ ಇದ್ದೇನೆ' ಎಂದು ಹೇಳಿದ್ದಾರೆ.
ಬಾರಬಂಕಿಯಲ್ಲಿ ದೇವ ಶರಿಫ್ ದರ್ಗಾಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಪರ್ಣ ಯಾದವ್, ನಾನು ರಾಮ ಮಂದಿ ನಿರ್ಮಾಣ ಪರವಾಗಿದ್ದೇನೆ ಮತ್ತು ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ. 
ರಾಮಾಯಣದ ಪ್ರಕಾರ, ರಾಮನ ಜನ್ಮಸ್ಥಳ ಅಯೋಧ್ಯ ಆಗಿದ್ದು ಅಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಮುಲಾಯಂ ಸೊಸೆ ಹೇಳಿದ್ದಾರೆ.
ಇದೇ ವೇಳೆ ನೀವು ಬಿಜೆಪಿ ಜತೆ ಇದ್ದೀರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅಪರ್ಣ, ನಾನು ಬಿಜೆಪಿ ಜೊತೆ ಇಲ್ಲ. ಆದರೆ ಶ್ರೀರಾಮನ ಜತೆ ಇದ್ದೇನೆ ಎಂದರು.
2017ರ ವಿಧಾನಸಭೆ ಚುನಾವಣೆಯಲ್ಲಿ ಎಸ್ ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅಪರ್ಣ ಈಗ ತಮ್ಮ ಚಾಚಾ ಶಿವಪಾಲ್ ಸಿಂಗ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ(ಪಿಎಸ್ ಪಿಎಲ್) ಬೆಂಬಲಿಸುತ್ತಿದ್ದಾರೆ.
SCROLL FOR NEXT