ಎಂ.ಜೆ.ಅಕ್ಬರ್ ಜತೆ ಸಹಮತದ ಸಂಬಂಧ ಇರಲಿಲ್ಲ, ಸತ್ಯ ಹೇಳುವುದನ್ನು ಮುಂದುವರೆಸುವೆ: ಪಲ್ಲವಿ ಗೊಗೋಯ್ 
ದೇಶ

ಎಂ.ಜೆ.ಅಕ್ಬರ್ ಜತೆ ಸಹಮತದ ಸಂಬಂಧ ಇರಲಿಲ್ಲ, ಸತ್ಯ ಹೇಳುವುದನ್ನು ಮುಂದುವರೆಸುವೆ: ಪಲ್ಲವಿ ಗೊಗೋಯ್

ಪತ್ರಕರ್ತೆ ಪಲ್ಲವಿ ಗೋಗೋಯ್ ಅವರೊಂದಿಗೆ ಸಹಮತದ ಸಂಬಂಧ ಇತ್ತು ಎಂದು ಹೇಳಿರುವ ಎಂಜೆ ಅಕ್ಬರ್ ಅವರ ಹೇಳಿಕೆಯನ್ನು ಪಲ್ಲವಿ ಗೊಗೋಯ್ ಅಲ್ಲಗಳೆದಿದ್ದು, ಅಕ್ಬರ್ ಜೊತೆಗೆ ಸಹಮತದ ಸಂಬಂಧ ಇರಲಿಲ್ಲ

ವಾಷಿಂಗ್ ಟನ್: ಪತ್ರಕರ್ತೆ ಪಲ್ಲವಿ ಗೋಗೋಯ್ ಅವರೊಂದಿಗೆ ಸಹಮತದ ಸಂಬಂಧ ಇತ್ತು ಎಂದು ಹೇಳಿರುವ ಎಂಜೆ ಅಕ್ಬರ್ ಅವರ ಹೇಳಿಕೆಯನ್ನು ಪಲ್ಲವಿ ಗೊಗೋಯ್ ಅಲ್ಲಗಳೆದಿದ್ದು,  ಅಕ್ಬರ್ ಜೊತೆಗೆ ಸಹಮತದ ಸಂಬಂಧ ಇರಲಿಲ್ಲ, ಅದು ದಬ್ಬಾಳಿಕೆ ಹಾಗೂ ಅಧಿಕಾರದ ದುರ್ಬಳಕೆಯಿಂದ ಇದ್ದಂತಹ ಸಂಬಂಧ ಎಂದು ಹೇಳಿದ್ದಾರೆ. 
ನ್ಯಾಷನಲ್ ಪಬ್ಲಿಕ್ ರೇಡಿಯೋದ ವಾಣಿಜ್ಯ ವಿಭಾಗದ ಸಂಪಾದಕರಾಗಿರುವ ಪಲ್ಲವಿ ಗೊಗೋಯ್, ಎಂ ಜೆ ಅಕ್ಬರ್ ಪತ್ರಕರ್ತರಾಗಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಿದ್ದರು. ಈ ಬಳಿಕ ಪ್ರತಿಕ್ರಿಯೆ ನೀಡಿದ್ದ ಅಕ್ಬರ್, ಪಲ್ಲವಿ ಅವರೊಂದಿಗೆ ಸಹಮತದ ಸಂಬಂಧವಿತ್ತು ಎಂದು ಹೇಳಿದ್ದಾರೆ. ಆದರೆ ಅಕ್ಬರ್ ಹೇಳಿಕೆಯನ್ನು ತಿರಸ್ಕರಿಸಿರುವ ಪಲ್ಲವಿ ಗೋಗೋಯ್, ತಾನು ಮಾಡಿದ್ದ ಆರೋಪದ ಪ್ರತಿ ಪದಕ್ಕೂ ಈಗಲೂ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. 
ಪಲ್ಲವಿ ಜತೆ ಸಹಮತದ ಸಂಬಂಧ ಇತ್ತು. ನಾವಿಬ್ಬರು ಕೆಲವು ತಿಂಗಳ ಕಾಲ ಜೊತೆಗಿದ್ದೇವು. ಇದು ನನ್ನ ಸಂಸಾರಿಕ ಜೀವನದಲ್ಲಿ ಭಾರಿ ಕೋಲಾಹಲ ಎಬ್ಬಿಸಿತ್ತು ಎಂದು ಅಕ್ಬರ್ ಸ್ಪಷ್ಟನೆ ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?