ದೇಶ

ಉಗ್ರರಿಗೆ ಆರ್ಥಿಕ ನೆರವು: ಉಗ್ರ ಹಫೀಜ್, ಸಲಹುದ್ದೀನ್'ಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಎನ್ಐಎ

Manjula VN
ನವದೆಹಲಿ: ಉಗ್ರರಿಗೆ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ವಿಶೇಷ ನ್ಯಾಯಾಲಯ ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್'ಗೆ ಶನಿವಾರ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 
ಭಾರತದ ಇತರೆ ಹಾಗೂ ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಸಲುವಾಗಿ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಹಫೀಜ್ ಹಾಗೂ ಸಲಹುದ್ದೀನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡುವಂದೆ ಈ ಹಿಂದೆ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿತ್ತು. 
ಪ್ರಕರಣ ಸಂಬಂಧ ಕಳೆದ ಜ.18ರಂದೇ ಹಫೀಜ್, ಸಲಹುದ್ದೀನ್ ಸೇರಿ ಒಟ್ಟು 12 ಮಂದಿ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. 

ತನಿಖಾ ಸಂಸ್ಥೆ 12 ಆರೋಪಿಗಳ ವಿರುದ್ಧ 12,794 ಪುಟಗಳ ಜಾರ್ಜ್ ಶೀಟ್ ಸಲ್ಲಿಸಿತ್ತು. ಮೇ.30 2017ರಂದು ಪ್ರಕರಣ ದಾಖಲಿಸಿದ ಬಳಿಕ ಮೊದಲ ಆರೋಪಿಯನ್ನು ಕಳೆದ ವರ್ಷ ಜುಲೈ.24 ರಂದು ಬಂಧನಕ್ಕೊಳಪಡಿಸಲಾಗಿತ್ತು ಎಂದು ಎನ್ಐಎ ಹೇಳಿದೆ. 
SCROLL FOR NEXT