ದೇಶ

ಮೇಕ್ ಇನ್ ಇಂಡಿಯಾ: ಸ್ವದೇಶದಲ್ಲೇ ಬುಲೆಟ್ ರೈಲು ಬೋಗಿಗಳ ನಿರ್ಮಾಣ, ರಫ್ತಿಗೆ ಭಾರತ ಉತ್ಸುಕ!

Vishwanath S
ನವದೆಹಲಿ/ಜಪಾನ್: ಬುಲೆಟ್ ರೈಲು ಬೋಗಿಗಳನ್ನು ತಯಾರಿಸಲು ಮತ್ತು ರಫ್ತು ಮಾಡಲು ಭಾರತವು ಜಪಾನ್ ನೊಂದಿಗೆ ಪ್ರಸ್ತಾಪಿಸಿದ್ದು ಸ್ವದೇಶದಲ್ಲಿ ಬೋಗಿಗಳ ನಿರ್ಮಾಣ ಮಾಡುವುದರಿಂದ ಶಿಂಕಾನ್ಸೆನ್ ರೈಲುಗಳನ್ನು ನಿರ್ವಹಿಸುವ ವೆಚ್ಚವನ್ನು ತಗ್ಗಿಸಬಹುದು ಎಂದು ಭಾರತೀಯ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ದೇಶದ ಮೊದಲ ಬುಲೆಟ್ ರೈಲು ಯೋಜನೆ ಇದಾಗಿದೆ. ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ 2022ಕ್ಕೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. 
ಭಾರತ ಜಪಾನ್ ನಿಂದ ಸುಮಾರು 18 ಶಿಂಕಾನ್ಸೆನ್ ರೈಲುಗಳನ್ನು ಬರೋಬ್ಬರಿ 7 ಸಾವಿರ ಕೋಟಿ ನೀಡಿ ಖರೀದಿಸುತ್ತಿದೆ. ಇನ್ನು ಬುಲೆಟ್ ರೈಲು ಬೋಗಿಗಳ ನಿರ್ಮಾಣಕ್ಕೆ ತಂತ್ರಜ್ಞಾನವನ್ನು ನೀಡುವ ಭರವಸೆಯನ್ನು ಜಪಾನ್ ಸರ್ಕಾರ ನೀಡಿದೆ. ಸ್ವದೇಶದಲ್ಲೇ ಬುಲೆಟ್ ರೈಲು ಬೋಗಿಗಳ ನಿರ್ಮಾಣ ಸಾಧ್ಯವಾದರೆ ಬೋಗಿಗಳ ವೆಚ್ಚ ಕಡಿಮೆಯಾಗಲಿದೆ ಎಂದು ರೈಲ್ವೆ ಹಿರಿಯ ಅಧಿಕಾರಿ ರಾಜೇಶ್ ಅಗರವಾಲ್ ಹೇಳಿದ್ದಾರೆ. 
ಉತ್ತರಪ್ರದೇಶದಲ್ಲಿ ಬುಲೆಟ್ ರೈಲು ಬೋಗಿಗಳ ನಿರ್ಮಾಣ ಕಂಪನಿಯನ್ನು ಸ್ಥಾಪಿಸಲಾಗುವುದು. ಈ ಮೂಲಕ 1 ಲಕ್ಷದ 50 ಸಾವಿರ ಜನರಿಗೆ ಉದ್ಯೋಗ ಭಾಗ್ಯ ಸಿಗಲಿದೆ. ಇನ್ನು 50 ರೈಲ್ವೆ ಕಾರ್ಯಾಗಾರಗಳು ಮತ್ತು ಸುಮಾರು 6 ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗುವುದು ಎಂದರು.
SCROLL FOR NEXT