ಚತ್ತೀಸ್ ಗಢ:  ಸಿಐಎಸ್ ಎಫ್ ಮೇಲೆ ಮಾವೋವಾದಿಗಳ ದಾಳಿ, ನಾಲ್ವರು ಬಲಿ! 
ದೇಶ

ಚತ್ತೀಸ್ ಗಢ: ಸಿಐಎಸ್ ಎಫ್ ಮೇಲೆ ಮಾವೋವಾದಿಗಳ ದಾಳಿ, ಓರ್ವ ಜವಾನ್ ಸೇರಿ ನಾಲ್ವರ ಸಾವು!

ವಿಧಾನಸಭಾ ಚುನಾವಣೆಗೆ ಸಜ್ಜುಗೊಂಡಿರುವ ಚತ್ತೀಸ್ ಗಢದ ದಾಂತೆವಾಡದಲ್ಲಿ ಮಾವೋವಾದಿಗಳ ದಾಳಿ ನಡೆದಿದ್ದು, ನಾಲ್ವರು ಜೀವ ತೆತ್ತಿದ್ದಾರೆ.

ರಾಯ್ಪುರ: ವಿಧಾನಸಭಾ ಚುನಾವಣೆಗೆ ಸಜ್ಜುಗೊಂಡಿರುವ ಚತ್ತೀಸ್ ಗಢದ ದಾಂತೆವಾಡದಲ್ಲಿ ಮಾವೋವಾದಿಗಳ ದಾಳಿ ನಡೆದಿದ್ದು, ನಾಲ್ವರು ಜೀವ ತೆತ್ತಿದ್ದಾರೆ. 

ಸಿಐಎಸ್ಎಫ್ ನ್ನು ಗುರಿಯಾಗಿರಿಸಿಕೊಂಡು ಮಾವೋವಾದಿಗಳು ದಾಳಿ ನಡೆಸಿದ್ದು,  ಪಕ್ಷದ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಈ ಘಟನೆ ನಡೆದಿದೆ.  ಮಾವೋವಾದಿಗಳು ಬಳಕೆ ಮಾಡಿದ ಸುಧಾರಿತ ಸ್ಫೋಟ ಸಾಧನದ ಮೂಲಕ ನಡೆಸಿರುವ ಸ್ಫೋಟಕ್ಕೆ ಓರ್ವ ಭದ್ರತಾ ಸಿಬ್ಬಂದಿಯೂ ಸೇರಿದಂತೆ 4 ಜನರು ಬಲಿಯಾಗಿದ್ದಾರೆ

ಮಿನಿ ಬಸ್ ನ ಚಾಲಕ, ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ಯೋಧರಿಗೆ ತೀವ್ರವಾದ ಗಾಯಗಳುಂಟಾಗಿದ್ದು, ಭದ್ರತಾ ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದರೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ದಾಂತೇವಾಡ ಎಸ್ ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ. ನ.09 ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video