25 Indian labourers held captive in Malaysia: NGO
ಕೋಲ್ಕತ್ತಾ: ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಮಲೇಷ್ಯಾಗೆ ತೆರಳಿದ್ದ ಭಾರತದ 25 ಕಾರ್ಮಿಕರನ್ನು ನೇಮಕ ಮಾಡಿದ್ದ ಸಂಸ್ಥೆಯೇ ಸೆರೆಯಲ್ಲಿಟ್ಟುಕೊಂಡಿರುವುದು ಈಗ ಬಹಿರಂಗವಾಗಿದೆ.
ಕೋಲ್ಕತ್ತಾದ ಎನ್ ಜಿಒ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ರಾಷ್ಟ್ರೀಯ ಮಾನವ ಸಾಗಣೆ ವಿರೋಧಿ ಸಮಿತಿ ಕಾರ್ಮಿಕರನ್ನು ವಾಪಸ್ ಕರೆತರುವುದಕ್ಕೆ ವಿದೇಶಾಂಗ ಇಲಾಖೆಯ ನೆರವು ಕೇಳಿದೆ. ಮಲೇಷ್ಯಾದಲ್ಲಿ ಸಿಲುಕಿರುವ ಇಬ್ಬರು ಕಾರ್ಮಿಕರು ವಿಡಿಯೋ ಮಾಡಿದ ಬಳಿಕ ಈ ಮಾಹಿತಿ ಬಹಿರಂಗವಾಗಿದ್ದು, ಸಂಸ್ಥೆ ಕೇಂದ್ರ ವಿದೇಶಾಂಗ ಇಲಾಖೆಯ ನೆರವು ಕೇಳಿದೆ. ಕಾರ್ಮಿಕರನ್ನು ರಕ್ಷಿಸುವಂತೆ ಪ್ರಧಾನಿಗೆ ಪತ್ರವನ್ನೂ ಬರೆದಿರುವ ಸಂಸ್ಥೆ ಮಲೇಷ್ಯಾದಲ್ಲಿ ಸಿಲುಕಿರುವ ಇಬ್ಬರು ಕಾರ್ಮಿಕರು ಜೀವ ಉಳಿಸುವುದಕ್ಕೆ ಯತ್ನಿಸುತ್ತಿರುವುದನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದು, ಕೂಡಲೇ ಕಾರ್ಮಿಕರ ರಕ್ಷಣೆಗೆ ಸ್ಪಂದಿಸಬೇಕೆಂದು ಮನವಿ ಮಾಡಲಾಗಿದೆ.
ಕನಿಷ್ಟ 25 ಕಾರ್ಮಿಕರು ಬಂಧನದಲ್ಲಿರುವ ಸಾಧ್ಯತೆ ಇದ್ದು, ಜೀವನ ಪರ್ಯಂತ ಬಂಧನಕ್ಕೊಳಪಡಿಸುವುದಾಗಿ ನೇಮಕ ಮಾಡಿಕೊಂಡಿರುವ ಸಂಸ್ಥೆ ಬೆದರಿಕೆ ಹಾಕುತ್ತಿದೆ ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮ್ಯಾನ್ ಪವರ್ ಕನ್ಸ್ಟ್ರಕ್ಷನ್ಸ್ ಎಂಬ ಏಜೆನ್ಸಿ ಮೂಲಕ ಈ ಕಾರ್ಮಿಕರು ಮಲೇಷ್ಯಾಗೆ ಟೂರಿಸ್ಟ್ ವೀಸಾ ಪಡೆದು ಕೆಲಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.