ಸ್ವಾತಿ ಚತುರ್ವೇದಿ 
ದೇಶ

ಭಾರತೀಯ ಪತ್ರಕರ್ತೆ ಸ್ವಾತಿ ಚತುರ್ವೇದಿಗೆ ಲಂಡನ್ ಮಾಧ್ಯಮ ಸ್ವಾತಂತ್ರ್ಯ ಪ್ರಶಸ್ತಿ

ಭಾರತದ ಫ್ರೀಲಾನ್ಸ್ ಪತ್ರಕರ್ತೆ ಸ್ವಾತಿ ಚತುರ್ವೇದಿಗೆ ಶೌರ್ಯ ಪ್ರದರ್ಶನಕ್ಕಾಗಿ ನೀಡಲಾಗುವ 2018 ನೇ ಸಾಲಿನ ಲಂಡಾನ್ ಪತ್ರಿಕಾ ಸ್ವಾತಂಟ್ರ್ಯ ಪ್ರಶಸ್ತಿ ಲಭಿಸಿದೆ.

ಭಾರತದ ಫ್ರೀಲಾನ್ಸ್ ಪತ್ರಕರ್ತೆ ಸ್ವಾತಿ ಚತುರ್ವೇದಿಗೆ  ಶೌರ್ಯ ಪ್ರದರ್ಶನಕ್ಕಾಗಿ  ನೀಡಲಾಗುವ 2018 ನೇ ಸಾಲಿನ ಲಂಡಾನ್ ಪತ್ರಿಕಾ ಸ್ವಾತಂಟ್ರ್ಯ ಪ್ರಶಸ್ತಿ ಲಭಿಸಿದೆ. 
ತನಿಖಾ ವರದಿಗಳಿಂದಲೇ ಖ್ಯಾತಿ ಪಡೆದಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರ ಐ ಆಪ್ ಎ ಟ್ರೋ: ಇನ್ ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ದಿ ಬಿಜೆಪಿಸ್ ಡಿಜಿಟಲ್ ಆರ್ಮಿ ಕೃತಿಗೆ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸ್ವಾತಿ ಚತುರ್ವೇದಿ ಅವರ ತನಿಖಾ ವರದಿಗಳು ಸಾಕಷ್ಟು ಟ್ರೋಲ್ ಗಳಿಗೂ ಒಳಗಾಗಿವೆ. 
ದ್ವೇಷಮಯ ಟ್ರೋಲ್ ಗಳನ್ನು ಬಿಜೆಪಿಯ ಐಟಿ ಸೆಲ್ ನಲ್ಲಿ ಹೇಗೆ ಹರಿಯಬಿಡಲಾಗುತ್ತದೆ ಎಂಬುದನ್ನು ಸ್ವಾತಿ ತಮ್ಮ ಕೃತಿಯಲ್ಲಿ ಬಹಿರಂಗಗೊಳಿಸಿದ್ದರು.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾತಿ ಚತುರ್ವೇದಿ, ನನ್ನ ಕರ್ತವ್ಯ ನಾನು ಮಾಡುತ್ತಿರುವುದಕ್ಕಾಗಿ ಶೌರ್ಯ ಪ್ರಶಸ್ತಿ ಪಡೆಯಬೇಕಾಗಿರುವುದು ಖೇದಕರ ಎಂದು ಹೇಳಿದ್ದಾರೆ. 
ಡೊನಾಲ್ಡ್ ಟ್ರಂಪ್ ಹೇಳುತ್ತಾರೆ ನಾವು ರಾಷ್ಟ್ರವಿರೋಧಿಗಳೆಂದು ಭಾರತದಲ್ಲಿ ಕಳೆದ ವರ್ಷ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ, ಈ ರೀತಿಯ ಘಟನೆಗಳು ಭಯ ಮೂಡಿಸುತ್ತವೆ ಎಂದು ಚತುರ್ವೇದಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!