ದೇಶ

ಗಣರಾಜ್ಯೋತ್ಸವಕ್ಕೆ ಬರಲು ಟ್ರಂಪ್ ನಿರಾಕರಣೆ: ಪಟ್ಟಿಯಲ್ಲಿ ಆಫ್ರಿಕಾ ನಾಯಕರ ಹೆಸರು!

Srinivasamurthy VN
ನವದೆಹಲಿ: 2019 ಗಣರಾಜ್ಯೋತ್ಸವ ದಿನಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಳ್ಳುತ್ತಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸುವ ವಿದೇಶಿ ಗಣ್ಯರ ಪಟ್ಟಿ ಸಿದ್ಧವಾಗುತ್ತಿದೆ.
ಪ್ರಮುಖವಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಬೇಕು ಎಂಬ ಭಾರತದ ಮನವಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ ಬೆನ್ನಲ್ಲೇ ಇದೀಗ ಭಾರತ ಸರ್ಕಾರ ಆಫ್ರಿಕನ್ ಮುಖಂಡರತ್ತ ದೃಷ್ಟಿ ನೆಟ್ಟಿದೆ. ಮೂಲಗಳ ಪ್ರಕಾರ ಆಫ್ರಿಕಾದ ಗಣ್ಯರೊಬ್ಬರು ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ದಕ್ಷಿಣ ಆಫ್ರಿಕಾದ ಆಧ್ಯಕ್ಷ ಸಿರಿಲ್ ರಮಫೊಸಾ ಹೆಸರು ಅಂತಿಮವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಸರ್ಕಾರ ತನ್ನ ಅಂತಿಮ ಪ್ರಕಟಣೆ ನೀಡಿಲ್ಲ. ಆಫ್ರಿಕಾದ ರಾಯಭಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರಮಫೋಸಾ ಅವರ ನಿರ್ಧಾರಕ್ಕೆ ಕಾಯಲಾಗುತ್ತಿದೆ ಎಂದು ಹೇಳಲಾಗಿದೆ.
SCROLL FOR NEXT