ಲಖನೌ: ಅಲಹಾಬಾದ್ ಹಾಗೂ ಫೈಜಾಬಾದ್ ಹೆಸರುಗಳನ್ನು ಪ್ರಯಾಗ್ ರಾಜ್, ಅಯೋಧ್ಯೆಯೆಂದು ಬದಲಿಸಿದಂತೆಯೇ ಉತ್ತರಪ್ರದೇಶದಲ್ಲಿರುವ ಹಲವು ನಗರಗಳ ಹೆಸರನ್ನೂ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಬದಲಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ಸಂಗೀತ್ ಸೋಮ್ ಅವರು ಶುಕ್ರವಾರ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿರುವ ಹಲವು ಜಿಲ್ಲೆಗಳ ಹೆಸರನ್ನು ಮೂಲ ಹೆಸರಿಗೆ ಬದಲಾಯಿಸುವಂತೆ ಜನರು ಸಾಕಷ್ಟು ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದಾರೆ, ಹೀಗಾಗಿ ರಾಜ್ಯದಲ್ಲಿರುವ ಹಲವು ನಗರಗಳ ಹೆಸರನ್ನು ಬದಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಜಾಫರ್ ನಗರವನ್ನು ಲಕ್ಷ್ಮಣ ನಗರವೆಂದು ಹೆಸರಿಡಲಾಗುತ್ತದೆ ಎಂದು ಹೇಳಿದ್ದಾರೆ.
ಮುಘಲರ ಆಡಳಿತದಲ್ಲಿ ನಡೆದಿರುವ ಅಸ್ಪಷ್ಟತೆಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ಸರಿಪಡಿಸಲಿದೆ. ಕಳೆದುಕೊಂಡಿದ್ದ ಸಂಪ್ರದಾಯಗಳನ್ನು ಮತ್ತೆ ಮರುಸ್ಥಾಪನೆ ಮಾಡಲು ನಮ್ಮ ಸರ್ಕಾರ ಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics