ದೇಶ

ಇವತ್ತೊಂದೇ ದಿನ ದಾಖಲೆ ಪ್ರಮಾಣದ 27 ಸಾವಿರ ಪ್ರವಾಸಿಗರಿಂದ ಏಕತಾ ಪ್ರತಿಮೆ ವೀಕ್ಷಣೆ!

Nagaraja AB

ಕೆವಡಿಯಾ : ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ  ಸರ್ದಾರ್ ವಲ್ಲಭ ಭಾಯ್ ಪಟೇಲ್  ಅವರ ಏಕತಾ ಪ್ರತಿಮೆ ವೀಕ್ಷಿಸಲು ಬರುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆೇ ಇದೆ.

ಏಕತಾ ಪ್ರತಿಮೆ ಇರುವ ಸ್ಥಳ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು,  ಇಂದು ಬರೊಬ್ಬರಿ 27 ಸಾವಿರ ಪ್ರವಾಸಿಗರು ಏಕತಾ ಪ್ರತಿಮೆ ವೀಕ್ಷಣೆ ಮಾಡಿರುವುದು ಹೊಸ ದಾಖಲೆಯಾಗಿದೆ.

ಅಕ್ಚೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆಯನ್ನು ಉದ್ಘಾಟಿಸಿದ್ದರು.  ನವೆಂಬರ್ 1 ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ಅಲ್ಲಿಂದ ಈವರೆಗೂ ಇಂದೇ ಅಧಿಕ ಪ್ರಮಾಣದ ವೀಕ್ಷಕರು ಭೇಟಿ ನೀಡಿದ್ದು, ಪಟೇಲ್ ರ ಪ್ರತಿಮೆ ವೀಕ್ಷಿಸಿದ್ದಾರೆ.

ಕೆವಡಿಯಾ ಬಳಿಯ ಸರೋವರ ಅಣೆಕಟ್ಟು ಬಳಿ ವಿಶ್ವದಲ್ಲಿಯೇ 182 ಮೀಟರ್ ಅತಿ ಎತ್ತರದ ಸರ್ದಾರ್ ವಲ್ಲಭ ಭಾಯ್  ಪಟೇಲ್  ಪ್ರತಿಮೆ ಸ್ಥಾಪಿಸಲಾಗಿದೆ.

ಈ ಏಕತಾ ಪ್ರತಿಮೆ ಜೊತೆ ಪಟೇಲರ ಜೀವನಗಾಥೆ ಸಾರುವ ವಸ್ತು ಸಂಗ್ರಹಾಲಯ, ಲೇಸರ್ ಲೈಟ್ ಪ್ರದರ್ಶನ, ಪ್ರತಿಮೆ ಸುತ್ತಲಿನ ಪ್ರದೇಶದಲ್ಲಿ ಜಲವಿಹಾರ, ವಿವಿಧ ರಾಜ್ಯಗಳ ಮಹತ್ವ ಸಾರುವ ಪ್ರದರ್ಶನ ಕೇಂದ್ರ, ಸರ್ದಾರ್ ಪಟೇಲ್, ಗಾಂಧೀಜಿ, ಅಂಬೇಡ್ಕರ್ ಜೀವನ ಸಾಧನೆಗಳ ಅಧ್ಯಯನಕ್ಕೆ ಸಂಶೋಧನಾ ಕೇಂದ್ರ ಇದೆ.

SCROLL FOR NEXT