ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.3.31 ಕ್ಕೆ ಇಳಿದಿದೆ.
ನ.12 ರಂದು ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ ಹಣ್ಣು ಹಾಗೂ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿರುವುದರಿಂದ ಹಣದುಬ್ಬರ ಶೇ.3.31 ಕ್ಕೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿಲ್ಲರೆ ಹಣದುಬ್ಬರ ದರ ಸೆಪ್ಟೆಂಬರ್ ನಲ್ಲಿ ಶೇ.3.7 ರಷ್ಟಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.3.58 ರಷ್ಟಿತ್ತು.
ಅಕ್ಟೋಬರ್ ತಿಂಗಳ ಆಹಾರ ಪ್ದಾರ್ಥಗಳ ಬೆಲೆ ಏರಿಕೆ ಪ್ರಮಾಣ ಶೇ.086 ರಷ್ಟು ಇಳಿಕೆಯಾಗಿತ್ತು.