ಅಪರಾಧಗಳ ಪುನರಾವರ್ತನೆ: ಏರ್ ಇಂಡಿಯಾ ಕಾರ್ಯಾಚರಣೆ ವಿಭಾಗದ ನಿರ್ದೇಶಕ ವಜಾ!
ನವದೆಹಲಿ: ಅಪರಾಧಗಳ ಪುನರಾವರ್ತನೆಗಾಗಿ ಏರ್ ಇಂಡಿಯಾ ಸಂಸ್ಥೆ ತನ್ನ ಕಾರ್ಯಾಚಾರಣೆ ವಿಭಾಗದ ನಿರ್ದೇಶಕ ಅರವಿಂದ್ ಕತ್ಪಾಲಿಯಾ ಅವರನ್ನು ವಜಾಗೊಳಿಸಿದೆ.
ಭಾರತೀಯ ವಾಣಿಜ್ಯ ಪೈಲಟ್ಸ್ ಅಸೋಸಿಯೇಷನ್ (ಐಸಿಪಿಎ) ಅರವಿಂದ್ ಕತ್ಪಾಲಿಯಾ ಅವರ ವಜಾಕ್ಕಾಗಿ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಪದೇ ಪದೇ ಏರ್ ಇಂಡಿಯಾ ಸಂಸ್ಥೆ ಬಗ್ಗೆ ಕೆಟ್ಟ ಭಾವನೆ ಬರುವಂತೆ ಕತ್ಪಾಲಿಯಾ ನಡೆದುಕೊಂಡಿದ್ದಾರೆ. ಆದ್ದರಿಂದ ತಕ್ಷಣವೇ ಅವರನ್ನು ವಜಾಗೊಳಿಸಬೇಕೆಂದು ಐಸಿಪಿಎ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಹುದ್ದೆಯಿಂದ ಅರವಿಂದ್ ಕತ್ಪಾಲಿಯಾ ಅವರನ್ನು ವಜಾಗೊಳಿಸಲಾಗಿದೆ.
ನ.11 ರಂದು ನವದೆಹಲಿ-ಲಂಡನ್ ವಿಮಾನದ ಕಾರ್ಯಾಚರಣೆಗೆ ಮುಖ್ಯಪೈಲಟ್ ಆಗಿ ಅರವಿಂದ್ ಕತ್ಪಾಲಿಯಾ ಕಾರ್ಯನಿರ್ವಹಿಸಬೇಕಿತ್ತು. ಆದರೆ ಬ್ರೀತ್ ಅನಲೈಜರ್ ಪರೀಕ್ಷೆಯಲ್ಲಿ ವಿಫಲಗೊಂಡ ಕಾರಣ ಅರವಿಂದ್ ಕತ್ಪಾಲಿಯಾ ಅವರ ಪರವಾನಗಿಯನ್ನು 3 ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು. ಈಗ ದೆಹಲಿ ಹೈಕೋಟ್ ಸಹ ಅರವಿಂದ್ ಕತ್ಪಾಲಿಯಾ ಅವರ ವಿರುದ್ಧ ವಿಚಾರಣೆಗೆ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics