ನಟ ಪ್ರಕಾಶ್ ರೈ 
ದೇಶ

ಕೇರಳ ಪ್ರವಾಹ ಸಂತ್ರಸ್ಥರಿಗೆ ಕೇವಲ 500 ಕೋಟಿ, ಪ್ರತಿಮೆಗೆ 3 ಸಾವಿರ ಕೋಟಿ; ಪ್ರಕಾಶ್ ರೈ ಟೀಕೆ

ಕೇರಳ ಪ್ರವಾಹ ಸಂತ್ರಸ್ಥರಿಗೆ 500 ಕೋಟಿ ರೂ ನೀಡಿ, ಕೇವಲ ಪ್ರತಿಮೆ ನಿರ್ಮಾಣಕ್ಕೆ 3 ಸಾವಿರ ಕೋಟಿ ನೀಡಿದ ನಾಯಕನನ್ನು ಏನೆಂದು ಕರೆಯಬೇಕು ಎಂದು ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಹೈದರಾಬಾದ್: ಕೇರಳ ಪ್ರವಾಹ ಸಂತ್ರಸ್ಥರಿಗೆ 500 ಕೋಟಿ ರೂ ನೀಡಿ, ಕೇವಲ ಪ್ರತಿಮೆ ನಿರ್ಮಾಣಕ್ಕೆ 3 ಸಾವಿರ ಕೋಟಿ ನೀಡಿದ ನಾಯಕನನ್ನು ಏನೆಂದು ಕರೆಯಬೇಕು ಎಂದು ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪ್ರಕಾಶ್ ರೈ, ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾದ ರಾಜ್ಯವೊಂದರ ನಿರ್ಮಾಣಕ್ಕೆ ದಶಕಗಳೇ ಬೇಕು. ಆ ರಾಜ್ಯ ತನ್ನ ರಾಜ್ಯ ನಿರ್ಮಾಣಕ್ಕೆ 20 ಸಾವಿರ ಕೋಟಿ ರೂ ಕೇಳಿದರೆ ಪ್ರಧಾನಿ ಮೋದಿ ಕೇವಲ 500 ಕೋಟಿ ರೂ ನೀಡಿ ಕೈ ತೊಳೆದು ಕೊಳ್ಳುತ್ತಾರೆ. ಅದೇ ಮೋದಿ ಗುಜರಾತ್ ನಲ್ಲಿ ಪ್ರತಿಮೆ ನಿರ್ಮಾಣಕ್ಕೆ 3 ಸಾವಿರ ಕೋಟಿ ರೂ. ಹಣ ವ್ಯಯಿಸುತ್ತಾರೆ. ಇಲ್ಲಿ ಪ್ರತಿಮೆ ಮುಖ್ಯವೋ ಅಥವಾ ಮಾನವೀಯತೆ ಮುಖ್ಯವೋ... ಎಂದು ಪ್ರಶ್ನೆ ಮಾಡಿದ್ದಾರೆ.
ಅಂತೆಯೇ ಪ್ರಥಾನಿ ಮೋದಿ ಅವರ ಈ ಕಾರ್ಯವನ್ನು ಟೀಕಿಸಿರುವ ಪ್ರಕಾಶ್ ರೈ ಎಂತಹ ವ್ಯಕ್ತಿಯನ್ನು ನಾವು ಪ್ರಧಾನಿ ಮಾಡಿದ್ದೇವೆ. ನಿಜಕ್ಕೂ ಮೋದಿ ಓರ್ವ ಅಹಂ ತುಂಬಿಕೊಂಡಿರುವ ಮೂರ್ಖ ವ್ಯಕ್ತಿ ಎಂದು ಟೀಕಿಸಿದ್ದಾರೆ. ದೇಶದಲ್ಲಿ ನಿರೋದ್ಯಗ ಸಮಸ್ಯೆ ತಾಂಡವವಾಡುತ್ತಿದ್ದು, ರೈತರ ಸಮಸ್ಯೆಗಳು ತಾರಕಕ್ಕೇರಿರುವ ಈ ಹೊತ್ತಿನಲ್ಲಿ ಸ್ವಪ್ರತಿಷ್ಟೆ ಹೆಚ್ಚಿಸಿಕೊಳ್ಳುವ ಇಂತಹ ಮೂರ್ಖ ನಡೆಗಳು ಸರಿಯಲ್ಲ. ಪ್ರತಿಮೆ ನಿರ್ಮಾಣಕ್ಕೆ ನಮ್ಮ ಹಣವನ್ನು ದುರ್ಬಳಕೆ ಮಾಡಲಾಗಿದೆ. ನಾವೇನು ಬಿಕ್ಷೆ ಬೇಡುತ್ತಿಲ್ಲ. ನಮಗೆ ಪ್ರಶ್ನೆ ಮಾಡುವ ಹಕ್ಕಿದೆ ಎಂದು ರೈ ಕಿಡಿಕಾರಿದರು.
ಉದ್ದೇಶ ಪೂರ್ವಕ ಮಾಡಿಲ್ಲ ಎಂದ ಮಾತ್ರಕ್ಕೆ ಪರರ ನೋವು ಸತ್ಯವೆಂದಲ್ಲ: ಅರ್ಜುನ್ ಸರ್ಜಾಗೆ ಟಾಂಗ್
ಇದೇ ವೇಳೆ ಮೀಟೂ ಆರೋಪ ಎದುರಿಸುತ್ತಿರುವ ನಟ ಅರ್ಜುನ್ ಸರ್ಜಾ ಅವರಿಗೂ ಪರೋಕ್ಷ ಟಾಂಗ್ ನೀಡಿದ ಪ್ರಕಾಶ್ ರೈ, ಉದ್ದೇಶ ಪೂರ್ವಕ ಮಾಡಿಲ್ಲ ಎಂದ ಮಾತ್ರಕ್ಕೆ ಪರರ ನೋವು ಸತ್ಯವೆಂದಲ್ಲ. ಉದ್ದೇಶ ಪೂರ್ವಕ ಮಾಡಿಲ್ಲವೆಂದರೂ ಕ್ಷಮೆ ಕೇಳುವುದು ಉತ್ತಮ ವ್ಯಕ್ತಿಯ ಲಕ್ಷಣ ಎಂದು ಹೇಳಿದ್ದಾರೆ. ಅಲ್ಲದೆ ತಾವೂ ಮೀಟೂ ಪರವಿದ್ದು, ಮಹಿಳೆಯರ ಬೆಂಬಲಕ್ಕೆ ತಾವು ಸದಾ ಮುಂದಿರುತ್ತೇವೆ ಎಂದು ಘೋಷಣೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT