ಕೊಲ್ಹಾಪುರ: ಕಮಿನಿಸ್ಟ್ ಮುಖಂಡ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣ ಆರೋಪಿ ಅಮೋಲ್ ಅರವಿಂದ್ ಕಾಳೆಯನ್ನು ನ್ಯಾಯಾಲಯ ಪೋಲೀಸ್ ಕಸ್ಟಡಿಗೆ ಹಸ್ತಾಂತರಿಸಿದೆ.
ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಸ್.ರಔಲ್ ಕಾಳೆಯನ್ನು ನವೆಂಬರ್ 22ರವರೆಗೆ ಮಹಾರಾಷ್ಟ್ರದ ಪೊಲೀಸ್ ವಿಶೇಷ ತನಿಖಾ ತಂಡದ (ಎಸ್ ಐಟಿ) ವಶಕ್ಕೆ ಒಪ್ಪಿಸಿದ್ದಾರೆ.
ಇದಕ್ಕೆ ಮುನ್ನ ಕಾಳೆ ಕರ್ನಾಟಕದ ಪ್ರಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಎಸ್ ಐಟಿ ವಶದಲ್ಲಿದ್ದನು.
ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಕಾಳೆ ಪಾತ್ರದ ಕುರಿತಂತೆ ಅವನ ವಿಚಾರಣೆ ನಡೆಸುವುದು ಅಗತ್ಯ ಎಂದು ಎಸ್ ಐಟಿ ನ್ಯಾಯಾಲಯಕ್ಕೆ ಹೇಳಿದೆ.
ವಿಚಾರವಾದಿ ಚಿಂತಕ, ಕಮಿನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಪನ್ಸಾರೆ ಫೆಬ್ರವರಿ 2015ರಲ್ಲಿ ತಮ್ಮ ಮನೆ ಸಮೀಪದಲ್ಲೇ ಗುಂಡಿನ ದಾಳಿಗೆ ಬಲಿಯಾಗಿದ್ದರು.