ದೆಹಲಿ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ 
ದೇಶ

ದೆಹಲಿ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅನಾಹುತ: ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಜೀವ ದಹನ!

ದೆಹಲಿಯ ಕರೋಲ್ ಬಾಗ್ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಜೀವ ದಹನವಾಗಿದ್ದರೆ ಇನ್ನೊಬ್ಬರು ಗಂಬೀರ ಗಾಯಗೊಂಡಿದ್ದಾರೆ.

ನವದೆಹಲಿ: ದೆಹಲಿಯ ಕರೋಲ್ ಬಾಗ್ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಜೀವ ದಹನವಾಗಿದ್ದರೆ ಇನ್ನೊಬ್ಬರು ಗಂಬೀರ ಗಾಯಗೊಂಡಿದ್ದಾರೆ.
ಮಧ್ಯಾಹ್ನ 12.30ರ ಸುಮಾರಿಗೆ ಸಂಭವಿಸ್ದ ಘಟನೆಯಲ್ಲಿ ಸಾವನ್ನಪ್ಪಿರುವ ಕಾರ್ಮಿಕರನ್ನು ಬಗಾನ್ ಪ್ರಸಾದ್ ( (55), ಆರ್.ಎಂ ನರೇಶ್ (40), ಆರತಿ (20) ಮತ್ತು ಆಶಾ (40) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳಲ್ಲಿ ಅಗ್ನಿಶಾಮಕ ತಂಡದ ಸಿಬ್ಬಂದಿ ಧಾವಿಸಿದ್ದು ಬೆಂಕಿ ನಂದಿಸುವ ಪ್ರಯತ್ನದಲ್ಲಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದಿಲ್ಲ. ದೆಹಲಿಯಲ್ಲಿಇಂತಹಾ ಬೆಂಕಿ ಅನಾಹುತ ಕಳೆದ ಎರಡು ದಿನಗಳಲ್ಲಿ ಎರಡನೇ ಬಾರಿಗೆ ನಡೆಯುತ್ತಿದೆ. ಇದಕ್ಕೆ ಮುನ್ನ ಶನಿವಾರ ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಸಹ ಬೆಂಕಿ ಅನಾಹುತ ಸಂಭವಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ; ಸರ್ವಪಕ್ಷ ಸಭೆಯಲ್ಲಿ ‘ಒಗ್ಗಟ್ಟಿನ ಮಂತ್ರ’: ರೈತರ ಹಿತವೇ ರಾಜಕೀಯಕ್ಕಿಂತ ಮೇಲು ಎಂದ CM ಡಿಕೆಶಿ

ಕಾವೇರಿ ಕಿಚ್ಚು: ‘ಭೂಮಿ-ನೀರು-ಭಾಷೆ ವಿಚಾರ ಬಂದಾಗ ಕರ್ನಾಟಕ ಒಂದಾಗಬೇಕು’: ಸಿದ್ದರಾಮಯ್ಯ

ಭೀಕರ ಹಿಮಪಾತ: 3 ದಿನಗಳ ನಂತರ ಪರ್ವತಾರೋಹಿ Nirmal Purja ಮೃತದೇಹ ಪತ್ತೆ

‘ಕಾವೇರಿ ನೀರಿನ ಒಳಹರಿವು ಬಳಸಿಕೊಳ್ಳಿ, ರೈತರ ಹಿತ ಕಾಪಾಡಿ’: ಸರ್ಕಾರಕ್ಕೆ ಬಿವೈ ವಿಜಯೇಂದ್ರ ಸಲಹೆ

‘ಮಗಳನ್ನು ಕ್ಷಮಿಸಿ ಮೋದಿಜಿ ಹೊಸ ಜೀವನ ಕೊಟ್ಟಿದ್ದಾರೆ, ಮಕ್ಕಳಿಗೆ Instagram, Facebook ಬೇಡ': ಪ್ರಧಾನಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ