ದೇಶ

ಸಿವಿಸಿ ವರದಿಗೆ 'ಸಾಧ್ಯವಾದಷ್ಟು ಬೇಗ' ಪ್ರತಿಕ್ರಿಯೆ ಸಲ್ಲಿಸಲು ಅಲೋಕ್ ವರ್ಮಾಗೆ 'ಸುಪ್ರೀಂ' ತಾಕೀತು!

Sumana Upadhyaya

ನವದೆಹಲಿ: ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಪಟ್ಟಂತೆ ಸಿವಿಸಿಯ ಪ್ರಾಥಮಿಕ ತನಿಖಾ ವರದಿಗೆ ಸಾಧ್ಯವಾದಷ್ಟು ಬೇಗನೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರಿಗೆ ಸೂಚಿಸಿದೆ. ಅಲ್ಲದೆ ನಿಗದಿತ ವಿಚಾರಣೆಯನ್ನು ನಾಳೆಗೆ ಮುಂದೂಡುವುದಿಲ್ಲ ಎಂದು ಕೂಡ ಹೇಳಿದೆ.

ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಪಟ್ಟಂತೆ ಪ್ರಾಥಮಿಕ ತನಿಖಾ ವರದಿಯನ್ನು ಮುಚ್ಚಳಿಕೆ ಲಕೋಟೆಯಲ್ಲಿ ನೀಡುವಂತೆ ಕಳೆದ 16ರಂದು ಸುಪ್ರೀಂ ಕೋರ್ಟ್ ಅಲೋಕ್ ವರ್ಮಾಗೆ ಸೂಚಿಸಿತ್ತು.

ಇಂದು ಬೇಗನೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದ ನ್ಯಾಯಾಲಯ ನಿಗದಿತ ವಿಚಾರಣೆ ದಿನಾಂಕವನ್ನು ವರ್ಗಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ಮಾತ್ರವಲ್ಲದೆ ಇಂದೇ ಆದಷ್ಟು ಶೀಘ್ರವೇ ಪ್ರತಿಕ್ರಿಯೆ ನೀಡುವಂತೆ ಹೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠಕ್ಕೆ ಅಲೋಕ್ ವರ್ಮಾ ಪರ ವಕೀಲ ಗೋಪಾಲ್ ಶಂಕರನಾರಾಯಣ ಪ್ರತಿಕ್ರಿಯೆ ನೀಡಿ ಸಿಬಿಐ ನಿರ್ದೇಶಕರು ನೋಂದಾವಣೆ ಮೂಲಕ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ನಾವು ದಿನಾಂಕವನ್ನು ಬದಲಿಸುವುದಿಲ್ಲ. ನಿಮ್ಮ ಪ್ರತಿಕ್ರಿಯೆಯನ್ನು ಆದಷ್ಟು ಬೇಗನೆ ನೀಡಿ. ಪ್ರತಿಕ್ರಿಯೆಯನ್ನು ನಮಗೆ ಓದಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ. ಇದಕ್ಕೆ ಉತ್ತರಿಸಿದ ನ್ಯಾಯಾಧೀಶರು ಇಂದೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

SCROLL FOR NEXT