ಶಿವಾಜಿ ಪ್ರತಿಮೆ(ಸಂಗ್ರಹ ಚಿತ್ರ)
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಭಯಪಡಬೇಡಿ, ಮುಂಬಯಿ ಕರಾವಳಿಯಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಎತ್ತರವಾದ ಶಿವಾಜಿ ವಿಗ್ರಹವನ್ನು ನಿರ್ಮಿಸಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಶಿವಸೇನೆ ಆಗ್ರಹಿಸಿದೆ.
ಮುಂಬಯಿ ಕರಾವಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶಿವಾಜಿ ಪ್ರತಿಮೆ ವಿಶ್ವದಲ್ಲೇ ಬೃಹತ್ ಆಗಿ ನಿರ್ಮಿಸಬೇಕು ಎಂದು ಎನ್ ಸಿಪಿ ಮುಖ್ಯಸ್ಥ ಜಯಂತ್ ಪಾಟಿಲ್ ಹೇಳಿದ್ದರು,. ಆದರೆ ಗುಜರಾತ್ ನಲ್ಲಿ ವಲ್ಲಭ ಬಾಯಿ ಅವರ ಏಕತಾ ಪ್ರತಿಮೆ ಪ್ರಪಂಚದಲ್ಲೆ ಅತಿ ದೊಡ್ಡದಾಗಿದ್ದು ಅದಕ್ಕಿಂತ ದೊಡ್ಡ ಶಿವಾಜಿ ಪ್ರತಿಮೆ ನಿರ್ಮಿಸಿದರೇ ಮೇದಿ ಆಶಯಕ್ಕೆ ಭಂಗ ಬರಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಯೋಚನೆ ಮಾಡುತ್ತಿದ್ದಾರೆ,
ಹೀಗಾಗಿ ಮೋದಿ ಅವರಿಗೆ ಹೆದರರದೆ ಅತಿ ಎತ್ತರದ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಧೈರ್ಯ. ತೋರಬೇಕು ಎಂದು ಶಿವಸೇನೆ ಫಡ್ನವೀಸ್ ಗೆ ತಮ್ನ ಮುಖವಾಣಿ ಸಾಮ್ನಾದಲ್ಲಿ ತಿಳಿಸಿದ್ದಾರೆ.