ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರನ್ನು ಸ್ವಾಗತಿಸುವ ವೇಳೆ ಯುವಕನೊಬ್ಬ ಚಪ್ಪಲಿ ಹಾರ ಹಾಕಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ನಗಾಡಾ ಕಚ್'ರೋಡ್'ಗೆ ಚುನಾವಣಾ ಪ್ರಚಾರ ಹಿನ್ನಲೆಯಲ್ಲಿ ಆಗಮಿಸಿದ್ದ ಬಿಜೆಪಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ದಿಲೀಪ್ ಶೆಖಾವತ್ ಅವರಿಗೆ ಯುವಕನೋರ್ವ ಚಪ್ಪಲಿ ಹಾರ ಹಾಕಿದ್ದಾನೆ.
ಬಿಜೆಪಿ ಕಾರ್ಯಕರ್ತನ ಸೋಗಿನಲ್ಲಿ ಸ್ಥಳದಲ್ಲಿದ್ದ ಯುವಕ ಶಾಸಕನಿಗೆ ಚಪ್ಪಲಿ ಹಾರ ಹಾಕಿದ್ದಾನೆ. ಚಪ್ಪಲಿ ಹಾರ ಹಾಕಿದ ಕೂಡಲೇ ತೀವ್ರವಾಗಿ ಕೆಂಡಾಮಂಡಲಗೊಂಡ ಶಾಸಕ ಅದನ್ನು ಕಿತ್ತೆಸೆದು ಯುವಕನಿಗೆ ಥಳಿಸಿದ್ದಾರೆ. ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.