ನವದೆಹಲಿ: ಸಂಸದ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ವಿರುದ್ಧದ ದಿಲ್ಲಿ ಸೀಲಿಂಗ್ (ಬೀಗಮುದ್ರೆ ಮುರಿದ) ಕೇಸಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮನೋಜ್ ತಿವಾರಿ ಬೀಗ ಮುರಿದ ಪ್ರಕರಣವು ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈಶಾನ್ಯ ದೆಹಲಿಯ ಸಂಸದನ ವಿರುದ್ಧ ಬಿಜೆಪಿ ಕ್ರಮ ಜರುಗಿಸಬೇಕಾಗಿದೆ ಎಂದು ಹೇಳಿದೆ.
"ಪೌರಾಡಳಿತ ಸಂಸ್ಥೆಯು ನಿರ್ಬಂಧಿತ ಆವರಣಕ್ಕೆ ಹಾಕಿದ್ದ ಬೀಗವನ್ನು ಒಡೆದಿರುವ ತಿವಾರಿ ಕ್ರಮವನ್ನು ಒಪ್ಪುವಂತಿಲ್ಲ; ಆತನ ವರ್ತನೆ ನಮಗೆ ತೀವ್ರ ನೋವುಂಟುಮಾಡಿದೆ'' ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿದ್ದರೂ ಕೋರ್ಟ್ ತಿವಾರಿ ವಿರುದ್ಧದ ಕೋರ್ಟ್ ನಿಂದನೆಯ ಕೇಸನ್ನು ತಾನು ಇಲ್ಲಿಗೆ ಕೊನೆಗೊಳಿಸುತ್ತಿರುವುದಾಗಿ ತಿಳಿಸಿದೆ,