ದೇಶ

ಏಕತಾ ಪ್ರತಿಮೆ ನಂತರ ಗುಜರಾತ್ ನಲ್ಲಿ 80 ಅಡಿ ಎತ್ತರದ ಬುದ್ದ ವಿಗ್ರಹ ಸ್ಥಾಪಿಸಲು ಚಿಂತನೆ

Shilpa D
ಗುಜರಾತ್: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 182 ಮೀಟರ್ ಉದ್ದದ ಲೋಹದ ಪ್ರತಿಮೆ ನಂತರ ಗುಜರಾತ್ ನಲ್ಲಿ  ಬೃಹದಾಕಾರದ ಬುದ್ದ ವಿಗ್ರಹ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. 
ಸಂಘಕಾಯ ಫೌಂಡೇಶನ್ ಗುಜರಾತಿನ ಗಾಂಧಿನಗರದಲ್ಲಿ 80 ಅಡಿಯ ಅತಿ ಎತ್ತರದ ವಿಗ್ರಹ ಸ್ಥಾಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. 
ಬುದ್ದ ಪ್ರತಿಮೆ ನಿರ್ಮಾಣಕ್ಕಾಗಿ ನಮಗೆ ಶೀಘ್ರವೇ ಭೂಮಿ ದೊರೆಯುವ ನಿರೀಕ್ಷೆಯಿದೆ ಎಂದು ಫೌಂಡೇಶನ್ ನ ಅಧ್ಯಕ್ಷ  ಪ್ರಶೀಲ್ ರತ್ನಾ ಹೇಳಿದ್ದಾರೆ.  ಅಕ್ಟೋಬರ್ 31 ರಂದು ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿ ಏಕತಾ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಗುಜರಾತ್ ನಲ್ಲಿ ಬುದ್ದ ವಿಶ್ವವಿದ್ಯಾನಿಲಯ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.
SCROLL FOR NEXT