ಪಂಪ: ಎಲ್ಲಾ ವಯಸ್ಕ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ಬಳಿಕ ಅಗ್ನಿಕುಂಡದಂತಾಗಿದ್ದ ಕೇರಳದ ಪ್ರಸಿದ್ಧ ಕ್ಷೇತ್ರ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಇಳಿಕೆಯಾದ ವಾರಗಳಲ್ಲೇ ಇದೀಗ ಪಂಪಾದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದಾಗಿ ಸೂಕ್ತ ವ್ಯವಸ್ಥೆಗಳು ಸಿಗದೆ ಭಕ್ತರು ಪರದಾಡುವಂತಾಗಿದೆ. ಈ ಹಿಂದೆ ಹೇಳಿಕೆ ನೀಡಿದ್ದ ಕೇರಳ ಸರ್ಕಾರ, ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದಂತೆಯೇ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಹೇಳಿತ್ತು.
ಪ್ರಸ್ತುತ ಪಂಪಾ ಬಳಿಯಿರುವ ಮಣಪ್ಪುರಂನಲ್ಲಿ 256 ಶೌಚಾಲಯಗಳಿದ್ದು, ಪ್ರಸ್ತುತ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಭಕ್ತರು ಗಂಟೆಗಟ್ಟಲೆ ಶೌಚಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾದೆ. ಶೌಚಾಲಯಗಳ ಮುಂದೆ ಗಂಟೆಗಟ್ಟಲೆ ನಿಲ್ಲಲು ಸಾಧ್ಯವಾಗದವರು ಸಾರ್ವಜನಿಕ ಪ್ರದೇಶಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ.
ಇನ್ನು ಪಂಪಾ ಸುತ್ತಮುತ್ತಲು ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇದು ಭಕ್ತಾದಿಗಳಿಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ತ್ರಿವೇಣಿ ಸೇತುವೆಯಿಂದ ಗಣಪತಿ ದೇಗುಲದತ್ತ ಕಾಲ್ನಡಿಗೆ ಮೂಲಕ ಹೋಗುವ ಭಕ್ತಾದಿಗಳು ಧೂಳಮಯಗೊಂಡಿರುವ ಗಾಳಿಯಿಂದ ಉಸಿರಾಡುವಂತಾಗಿದೆ.
ಆಂಧ್ರಪ್ರದೇಶದ ಚಿತ್ತೂರಿನಿಂದ ನಾವು ಬಂದಿದ್ದೇವೆ. 25 ಮಂದಿಯೊಂದಿಗೆ ನಾವು ದೇವಾಲಯಕ್ಕೆ ಬಂದಿದ್ದೇವೆ. ಆದರೆ, 1 ಗಂಟೆಯಿಂದ ಕಾಯುತ್ತಿದ್ದರೂ ಬಳಕೆ ಮಾಡಲು ಶೌಚಾಲಯಗಳು ದೊರೆಯುತ್ತಿಲ್ಲ. ಆಳವಿಲ್ಲದಿರುವುದರಿಂದ ಪಂಪಾ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಭಕ್ತಾದಿ ವೀರಯ್ಯ ಎಂಬುವವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos