ಅಯೋಧ್ಯೆ: ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮನ ಪ್ರತಿಮೆ 151 ಮೀಟರ್ ಎತ್ತರವಿರಲಿದೆ. ಪ್ರತಿಮೆ ಮೇಲೆ 20 ಮೀಟರ್ ಎತ್ತರದ ಛತ್ರಿ ಇರಲಿದ್ದು, 50 ಮೀಟರ್ ಎತ್ತರದ ಆಧಾರದ ಪೀಠವಿದೆ ಎಂದು ಮಾಹಿತಿ ವಿಭಾಗದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವನೀಶ್ ಅವಸ್ತಿ ಹೇಳಿದ್ದಾರೆ.
ಈ ಪ್ರತಿಮೆಯನ್ನು ಕಂಚಿನಿಂದ ಮಾಡಲಾಗುತ್ತಿದೆ. ಪ್ರತಿಮೆ ತಳದಲ್ಲಿ ಆಧುನಿಕ ಮ್ಯೂಸಿಯಂ ಇರಲಿದ್ದು, ಅಯೋಧ್ಯೆಯ ಇತಿಹಾಸವನ್ನು ಹೇಳಲಿದೆ. ರಾಮ ಮನುವಿನಿಂದ ಹಿಡಿದು ರಾಮ ಜನ್ಮಭೂಮಿಯ ಇಂದಿನ ಪರಿಸ್ಥಿತಿ ಮತ್ತು ಇಕ್ಷಾಕು ವಂಶದ ಕಥೆ ಈ ಮ್ಯೂಸಿಯಂನಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.