ಶ್ರೀನಗರ: ಜಮ್ಮು-ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜನೆ ಮಾಡುವುದಕ್ಕೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗುವುದಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸ್ಪಷ್ಟಪಡಿಸಿದ್ದಾರೆ.
ನ.21 ರಂದು ಪಿಡಿಪಿ-ಕಾಂಗ್ರೆಸ್, ಎನ್ ಸಿ ಸರ್ಕಾರ ರಚನೆ ಮಾಡುವ ಪ್ರಯತ್ನದಲ್ಲಿದ್ದಾಗಲೇ ರಾಜ್ಯಪಾಲರು ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಏಕಾ ಏಕಿ ವಿಸರ್ಜನೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಮುಫ್ತಿ, ರಾಜ್ಯಪಾಲರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಹಲವಾರು ಹಿತೈಶಿಗಳು ಸಲಹೆ ನೀಡಿದ್ದರು. ಆದರೆ ನಾನು ಕೋರ್ಟ್ ಗೆ ಹೋಗುವುದಿಲ್ಲ ಎಲ್ಲಕ್ಕಿಂತ ಸರ್ವೋಚ್ಛವಾದ ಜನತಾ ನ್ಯಾಯಾಲಯದೆದುರು ಹೋಗುತ್ತೇನೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
2-3 ಪಕ್ಷಗಳು ಸೇರಿ ರಚನೆ ಮಾಡುವ ಸಮ್ಮಿಶ್ರ ಸರ್ಕಾರದಿಂದ ಒಳಿತಾಗುವುದಿಲ್ಲ. ಕುದುರೆ ವ್ಯಾಪಾರ ನಡೆಯುತ್ತದೆ. ಆದ್ದರಿಂದ ವಿಧಾನಸಭೆಯನ್ನು ವಿಸರ್ಜಿಸಿರುವುದು ಸರಿಯಾಗಿದೆ ಎಂದು ರಾಜ್ಯಪಾಲರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.