ದೇಶ

ಮುಜಾಫರ್​ಪುರ ವಸತಿ ನಿಲಯ ಪ್ರಕರಣ: ಸುಪ್ರೀಂನಿಂದ ಬಿಹಾರ ಸರ್ಕಾರ ತರಾಟೆ

Nagaraja AB

ನವದೆಹಲಿ: ಮುಜಾಫರ್​ಪುರ ವಸತಿ ನಿಲಯ ಪ್ರಕರಣಕ್ಕೆ ಸಂಬಂಧಿಸಿದಂತೆ  ಸರಿಯಾದ ಎಫ್ ಐಆರ್  ದಾಖಲಿಸದ ಬಿಹಾರ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಐಪಿಸಿ ಸೆಕ್ಷನ್ 377  ಹಾಗೂ  ಪೋಕ್ಸೊ ಕಾಯ್ದೆ ಅನ್ವಯ 24 ಗಂಟೆಯೊಳಗೆ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.

ಎಫ್ ಐಆರ್ ದಾಖಲಿಸಿಲ್ಲ, ಐಪಿಸಿ ಸೆಕ್ಷನ್ 377 ಹಾಗೂ ಪೋಕ್ಸೊ ಕಾಯ್ದೆಯಡಿ ಒಂದು ವೇಳೆ  ಅಪರಾಧ ಕಂಡಬಂದರೆ ಸರ್ಕಾರದ ವಿರುದ್ಧ ಆದೇಶ ಜಾರಿಗೊಳಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಏನು ಮಾಡುತ್ತಿದ್ದೀರಾ ? ಇದು ನಾಚಿಕೆಗೇಡಿತನದು ಹಾಗೂ ಅಮಾನವೀಯವಾಗಿದ್ದು, ಎಲ್ಲಾ ವೇಳೆಯಲ್ಲೂ ಈ ದುರಂತ ಬಗ್ಗೆ ಹೇಳಿದ್ದರೂ ನಿಮ್ಮಗೆ ಗಂಭೀರ ಅನಿಸಲಿಲ್ಲವೇ ಎಂದು  ಬಿಹಾರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ವಸತಿ ನಿಲಯದಲ್ಲಿ ನಡೆದ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಬಿಐ ವಿಚಾರಣೆ ನಡೆಸಿದರೆ  ಸೂಚನೆಗಳನ್ನು ಪಾಲಿಸುವಂತೆ  ಸಿಬಿಐ ಪರ ವಕೀಲರಿಗೆ ಸುಪ್ರೀಂಕೋರ್ಟ್ ತಿಳಿಸಿತು.
SCROLL FOR NEXT