ದೇಶ

ನೋಟು ನಿಷೇಧದಿಂದ ಆರ್ಥಿಕತೆಯಲ್ಲಿ ಅಸ್ಸ್ಥಿರತೆ: ಸಂಸದೀಯ ಸಮಿತಿ ಮುಂದೆ ಆರ್ ಬಿಐ ಗವರ್ನರ್ ಹೇಳಿಕೆ

Raghavendra Adiga
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ದೇಶದ ಆರ್ಥಿಕತೆ ಅಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
ನೋಟು ನಿಷೇಧ, ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿಗಳು ಸೇರಿ ಅನೇಕ ವಿಚಾರದ ಬಗ್ಗೆ ವಿವರಿಸಲು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಮಂಗಳವಾರ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದಾರೆ. ಹೀಗೆ ಹಾಜರಿಗೆ ಮುನ್ನ ಕೆಲವು ವಿವಾದಾತ್ಮಕ ವಿಷಯದ ಕುರುತು ಲಿಖಿತ ಉತ್ತರ ನೀಡುವುದಕ್ಕಾಗಿ ತಾನು ಸಮಿತಿಗೆ ಬದ್ದನಾಗಿದ್ದೇಬ್ನೆ  ಎಂದು ಅವರು ಹೇಳಿದ್ದರು.
ಕಳೆದ ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಈಗ ಇಳಿಕೆಯಾಗುತ್ತಿದೆ, ಪರಿಣಾಮ ಆರ್ಥಿಕತೆ ವರ್ಧಿಸುತ್ತಿದೆ. ಹೀಗಾಇ ಆರ್ಥಿಕ ಬೆಳವಣಿಗೆ ಕುರಿತು "ಆಶಾವಾದ" ತಾಳಬಹುದು ಎಂದು ಆವರು ಅಭಿಪ್ರಾಯಪಟ್ಟರು.
ಸಾಲದ ಬೆಳವಣಿಗೆ ದರ ಶೇ.15ರಷ್ಟು ಏರಿಕೆಯಾಗಿತ್ತು.ಹಣದುಬ್ಬರವು ಶೇಕಡ 4 ಕ್ಕೆ ಇಳಿದಿದೆ ಮತ್ತು ಜಿಡಿಪಿ ಅನುಪಾತಕ್ಕೆ ಹೋಲಿಸಿದಾಗ ಹಣಕಾಸು ವಹಿವಾಟು ಹೆಚ್ಚಳವಾಗಿದೆ ಎಂದು ಪಟೇಲ್ ವಿವರಿಸಿದ್ದಾರೆ. ಆದರೆ 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಪನಗದೀಕರಣ ಅಥವಾ ನೋಟು ನಿಷೇಧವು ಆರ್ಥಿಕತೆಯನ್ನು ಅಸ್ಥಿರವಾಗಿಸಿದೆ ಎಂದು ಅವರು ಹೇಳಿದರು.
ಈ ಮೊದಲು ನವೆಂಬರ್ 12 ರಂದು ಪಟೇಲ್ ಸಂಸದೀಯ ಸಮಿತಿಯ ಮುಂದೆ ಹಾಜರಾಗಬೇಕಿತ್ತು.
ಕೇಂದ್ರ ಸರ್ಕಾರ ಆರ್ ಬಿಐ ಕಾಯ್ದೆಯಲ್ಲಿ ಕಲಂ 7ನ್ನು ಜಾರಿಗೊಳಿಸುವುದು, ಬ್ಯ್ಂಕುಗಳಲ್ಲಿನ ಅನುತ್ಪಾದಕ ಆಸ್ತಿ ವಿವರ, ಬ್ಯಾಂಕುಗಳ ವಿಲೀನ ಮ್ಮೊದಲಾದ ವಿವಾದಾತ್ಮಕ ವಿಚಾರಗಳಿಗೆ ಪಟೇಲ್ ಉತ್ತರಿಸಲಿಲ್ಲ ಎಂದು ಮೂಲಗಳು ಹೇಳಿದೆ.
ಸಮಿತಿಯ ಎದುರು ರಿಸರ್ವ್ ಬ್ಯಾಂಕ್ ಗವರ್ನರ್ ವಿಶ್ವ ಆರ್ಥಿಕತೆ ಹಾಗೂ ಭಾರತ ಆರ್ಥಿಕತೆಯ ಸ್ಥಿತಿಗತಿಗಳ ಕುರಿತು ವಿವರಿಸಿದ್ದಾರೆ.
SCROLL FOR NEXT