ದೇಶ

ನೋಟು ಅಮಾನ್ಯತೆಯಿಂದ ಆರ್ಥಿಕತೆಗೆ ಆಘಾತ- ಅರವಿಂದ್ ಸುಬ್ರಮಣಿಯನ್

Nagaraja AB

ನವದೆಹಲಿ: ನೋಟ್ ಅಮಾನ್ಯತೆ ಬಗ್ಗೆ ಮೌನ ಮುರಿದಿರುವ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಕರೆನ್ಸಿ ನಿರ್ಬಂಧದಿಂದ ಆರ್ಥಿಕ ದರ ಶೇ, 8ರಿಂದ 6.8ಕ್ಕೆ  ಇಳಿಯುವ ಮೂಲಕ ಆರ್ಥಿಕ ಆಘಾತವನ್ನುಂಟುಮಾಡಿತ್ತು ಎಂದು ಹೇಳಿದ್ದಾರೆ.

ಆರು ತಿಂಗಳ ಹಿಂದಷ್ಟೇ  ಆರ್ಥಿಕ ಸಲಹೆಗಾರರ ಹುದ್ದೆ ತ್ಯಜಿಸಿದ  ಅರವಿಂದ್ ಸುಬ್ರಮಣಿಯನ್,ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟ್ ಅಮಾನ್ಯತೆಯಿಂದ ಅಸಂಘಟಿತ ವಲಯದ ಮೇಲೆ ಪರಿಣಾಮ ಬೀರಿದ್ದಾಗಿ ಹೇಳಿದ್ದಾರೆ.

ಎನ್ ಡಿಎಸರ್ಕಾರದಲ್ಲಿ ನಾಲ್ಕು ವರ್ಷಗಳ ಕಾಲ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್, ಪೆಂಗ್ಯೂನ್ ಪ್ರಕಾಶನ ಸಂಸ್ಥೆ ಹೊರತರುತ್ತಿರುವ 'ಆಪ್ ಕೌನ್ಸಿಲ್ ' ಪುಸ್ತಕಕ್ಕೆ ಬರೆದಿರುವ  ದಿ ಚಾಲೆಂಚ್ ಆಫ್ ದಿ ಮೋದಿ ಜೈಟಿ ಎಕನಾಮಿ ಅಧ್ಯಾಯದಲ್ಲಿ ಈ ರೀತಿಯಲ್ಲಿ ಹೇಳಿದ್ದಾರೆ.
SCROLL FOR NEXT