ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ 
ದೇಶ

ಅಮಿತ್ ಶಾ ಇಷ್ಟವೋ,ಇಲ್ಲವೋ ಗೊತ್ತಿಲ್ಲ, ಬೀಫ್ ಬಿರಿಯಾನಿ ಕಳುಹಿಸುವಂತೆ ಕೆಸಿಆರ್'ಗೆ ಹೇಳುತ್ತೇನೆ: ಓವೈಸಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಷ್ಟ ಪಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಬೇಕಿದ್ದರೆ, ಅಮಿತ್ ಶಾ ಅವರಿಗೆ ಬಿರಿಯಾನಿ ಕಳುಹಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುತ್ತೇನೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ...

ಹೈದರಾಬಾದ್: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಷ್ಟ ಪಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಬೇಕಿದ್ದರೆ, ಅಮಿತ್ ಶಾ ಅವರಿಗೆ ಬಿರಿಯಾನಿ ಕಳುಹಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುತ್ತೇನೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 
ತೆಲಂಗಾಣ ರಾಜ್ಯದಲ್ಲಿ ಮುಸ್ಲಿಮರಿಗೆ ಚಂದ್ರಶೇಖರ್ ರಾವ್ ಅವರು ಬಿರಿಯಾನಿ ನೀಡಿದ್ದರು. ಇದಕ್ಕೆ ಅಮಿತ್ ಶಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 
ಇದಕ್ಕೆ ವ್ಯಂಗ್ಯವಾಡಿರುವ ಓವೈಸಿಯವರು, ಬೇಕಿದ್ದರೆ, ಅಮಿತ್ ಶಾ ಅವರಿಗೆ ಬೀಫ್ ಬಿರಿಯಾನಿ ಕಳುಹಿಸರು ಕೆಸಿಆರ್ ಅವರಿಗೆ ಶಿಫಾರಸು ಮಾಡುತ್ತೇನೆಂದು ಹೇಳಿದ್ದಾರೆ. 
ಯಾರೋ ಬಿರಿಯಾನಿ ತಿಂದರೆ, ಅಮಿತ್ ಶಾಗೇಕೆ ಹೊಟ್ಟೆ ಕಿಚ್ಚು? ಶಾ ಅವರಿಗೂ ಬಿರಿಯಾನಿ ಇಷ್ಟ ಎಂದು ನನಗೆ ಗೊತ್ತಿರಲಿಲ್ಲ. ನಿಮಗೆ ಕೊಟ್ಟಿಲ್ಲವೆಂದು ಬೇಸರವಿದ್ದರೆ, ನಿಮಗೂ ಬೀಫ್ ಬಿರಿಯಾನಿ ಕಳುಹಿಸಿಕೊಡುತ್ತೇವೆ, ನೀವೂ ತಿನ್ನಿ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಮೋದಿಯವರಿಗೆ ಟಾಂಗ್ ನೀಡಿರುವ ಓವೈಸಿ, ಆಹ್ವಾನವೇ ಇಲ್ಲದಿದ್ದರು ಮೋದಿ ಪಾಕಿಸ್ತಾನಕ್ಕೆ ತೆರಳಿ, ಷರೀಫ್ ಅವರ ಮಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರಿಗೆ ತಿನ್ನಲು ಏನು ಕೊಟ್ಟರು? ಅಲ್ಲಿ ಮೋದಿಯವರಿಗೆ ಎಂತಹ ಆಹಾರ ಕೊಟ್ಟಿದ್ದರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bangkok pubನಲ್ಲಿ ಭೀಕರ ಅಗ್ನಿ ಅವಘಡ; 27 ಮಂದಿ ಸಜೀವ ದಹನ; 63ಕ್ಕೂ ಹೆಚ್ಚು ಮಂದಿಗೆ ಗಾಯ, ವಿದ್ಯುತ್ ದೋಷವೇ ದುರಂತಕ್ಕೆ ಕಾರಣ?

ನಾಳೆ ಅರ್ಧಕ್ಕೆ ಹಾರಲಿದೆ ತ್ರಿವರ್ಣ ಧ್ವಜ; ದೇಶಾದ್ಯಂತ ಶೋಕಾಚರಣೆ: ಕತಾರ್‌ನ ಮಾಜಿ ಅಮೀರ್ ನಿಧನಕ್ಕೆ PM ಮೋದಿ ಸಂತಾಪ

ಅಮೆರಿಕ ಜೊತೆ ಒಪ್ಪಂದ 'ಮುಗಿದಿದೆ': ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಘೋಷಣೆ

ಮಾರುವೇಷ ಯಾಕೆ ಸ್ವಾಮಿ.. ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

'ಊಸರವಳ್ಳಿಯಂತೆ ಬದಲಾಗ್ತಾರೆ': ಹಿಂದಿ ಬರಲ್ಲ ಅಂತ ಪೋಸ್ ಕೊಟ್ಟೋರು, ದೆಹಲಿಯ CJPಯಲ್ಲಿ ಹಿಂದಿಯಲ್ಲೇ ಭಾಷಣ; ನೆಟ್ಟಿಗರು ಗರಂ, Video