ಹುತಾತ್ಮನಾದ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ತಂದೆಯ ಸಂತೈಸಿದ ಮತ್ತೋರ್ವ ಯೋಧ 
ದೇಶ

'ನೀವು ಏಕಾಂಗಿ ಅಲ್ಲ.. ನಾವಿದ್ದೇವೆ': ಹುತಾತ್ಮ ಯೋಧನ ತಂದೆಯ ಅಪ್ಪಿದ ಮತ್ತೋರ್ವ ಯೋಧ!

ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಹುತಾತ್ಮನಾದ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಸಾವಿನ ಬೆನ್ನಲ್ಲೇ ದುಃಖತಪ್ತ ತಂದೆಯನ್ನು ಮತ್ತೋರ್ವ ಯೋಧ ಅಪ್ಪಿ ಸಮಾಧಾನ ಮಾಡುತ್ತಿರುವ ಫೋಟೋ ಈಗ ವೈರಲ್ ಆಗುತ್ತಿದೆ.

ಶ್ರೀನಗರ: ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಹುತಾತ್ಮನಾದ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಸಾವಿನ ಬೆನ್ನಲ್ಲೇ ದುಃಖತಪ್ತ ತಂದೆಯನ್ನು ಮತ್ತೋರ್ವ ಯೋಧ ಅಪ್ಪಿ ಸಮಾಧಾನ ಮಾಡುತ್ತಿರುವ ಫೋಟೋ ಈಗ ವೈರಲ್ ಆಗುತ್ತಿದೆ.
ಈ ಹಿಂದೆ ಉಗ್ರ ಸಂಘಟನೆಯಲ್ಲಿ ಪಾಲ್ಗೊಂಡು ಬಳಿಕ ಸೇನೆ ಸೇರಿ ಯೋಧನಾಗಿ ಬದಲಾಗಿದ್ದ ಲ್ಯಾನ್ಸ್ ನಾಯಕ್ ವಾನಿ ಅವರು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಎನ್ ಕೌಂಟರ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದ್ದ ಈ ಎನ್ ಕೌಂಟರ್ ನಲ್ಲಿ ಇತರೆ ಮೂವರು ಅಧಿಕಾರಿಗಳು ಕೂಡ ಗಾಯಗೊಂಡಿದ್ದರು. ಬಳಿಕ ಹುತಾತ್ಮ ಯೋಧ ವಾನಿ ಅವರನ್ನು ಅವರ ಹುಟ್ಟೂರಾದ ಕುಲ್ಗಾಮ್ ಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು. 
ಈ ವೇಳೆ ತೀವ್ರ ದುಃಖಿತರಾಗಿದ್ದ ವಾನಿ ಅವರ ತಂದೆಯನ್ನು ಯೋಧರೊಬ್ಬರು ಅಪ್ಪಿ ಸಮಾಧಾನ ಪಡಿಸಿದ್ದರು. ಈ ದೃಶ್ಯದ ಫೋಟೋ ತೆಗೆದಿದ್ದ ಕೆಲವರು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿ ಅದಕ್ಕೆ ನೀವು ಏಕಾಂಗಿ ಅಲ್ಲ.. ನಿಮ್ಮೊಂದಿಗೆ ಭಾರತೀಯ ಸೇನೆ ಮತ್ತು ಸೈನಿಕರಿದ್ದಾರೆ ಎಂಬ ಅಡಿ ಬರಹ ಬರೆಯಲಾಗಿತ್ತು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, 3 ಸಾವಿರಕ್ಕೂ ಅಧಿಕ ಲೈಕ್ ಗಳು ಮತ್ತು 997 ಬಾರಿ ರಿಟ್ವೀಟ್ ಆಗಿದೆ. ಅಂತೆಯೇ ವಾನಿ ಅವರ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಹಲವು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!