ದೇಶ

ಮುಸ್ಲಿಮರಿಗೆ ಶೇ.12ರಷ್ಟು ಮೀಸಲಾತಿ ಪ್ರಶ್ನಿಸಿದ ಮತದಾರನ ವಿರುದ್ಧ ಕೆಸಿಆರ್ ಕೆಂಡಾಮಂಡಲ

Lingaraj Badiger
ಹೈದರಾಬಾದ್: ತಾಳ್ಮೆ ಕಳೆದುಕೊಂಡ ಟಿಆರ್ ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮತದಾರರೊಬ್ಬರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.
ಕೋಮರಾಮ್ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡುತ್ತಿದ್ದ ಕೆಸಿಆರ್ ಅವರಿಗೆ ವ್ಯಕ್ತಿಯೊಬ್ಬರು ಮುಸ್ಲಿಮರಿಗೆ ಶೇ.12ರಷ್ಟು ಮೀಸಲಾತಿ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಸಿಆರ್ ಅವರು, ಏನು ಮಾತನಾಡುತ್ತಿದ್ದಿ? ಸುಮ್ನೆ ಕುತ್ಕೊ, ನಿಮ್ಮ ಅಪ್ಪನಿಗೆ ಹೇಳುತ್ತೇನೆ. ಏನು ತಮಾಷೆ ಮಾಡುತ್ತಿದ್ದೀಯಾ? ಎಂದು ಗದರಿದ್ದಾರೆ.
ಬಳಿಕ ತಮ್ಮ ಭಾಷಣದಲ್ಲಿ ಮೀಸಲಾತಿ ಪ್ರಶ್ನಿಸಿದ ಮತದಾರರನ್ನು ಸನ್ಯಾಸಿ ಎಂದು ಜರಿದಿದ್ದು, ಬುಡಕಟ್ಟು ಜನರ ಮತ್ತು ಮುಸ್ಲಿಮರ ಮೀಸಲಾತಿ ಹೆಚ್ಚಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.
ಮುಸ್ಲಿಮರ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸುವ ಮಸೂದೆಯನ್ನು ತೆಲಂಗಾಣ ವಿಧಾನಸಭೆಯಲ್ಲಿ ಈಗಾಗಲೇ ಅಂಗೀಕರಿಸಲಾಗಿದ್ದು, ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ ಮುಸ್ಲಿಮ ಮೀಸಲಾತಿ ಹೆಚ್ಚಿಸಲು ನರೇಂದ್ರ ಮೋದಿ ಅನುಮತಿ ನೀಡುತ್ತಿಲ್ಲ ಎಂದು ಇತ್ತೀಚಿಗೆ ಕೆಸಿಆರ್ ಆರೋಪಿಸಿದ್ದರು.
SCROLL FOR NEXT