ದೇಶ

ಭೀಮಾ ಕೋರೆಗಾಂವ್ ಹಿಂಸಾಚಾರ: ಸಂಭಾಜಿ ಭಿಡೆ ವಿರುದ್ಧದ 6 ಪ್ರಕರಣ ಹಿಂಪಡೆದ ಮಹಾ ಸರ್ಕಾರ

Lingaraj Badiger
ಪುಣೆ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ಬಲ ಪಂಥೀಯ ನಾಯಕ ಸಂಭಾಜಿ ಭಿಡೆ ವಿರುದ್ಧದ ಕನಿಷ್ಠ ಆರು ಗಲಭೆ ಪ್ರಕರಣಗಳನ್ನು ಮಹಾರಾಷ್ಟ್ರ ಪೊಲೀಸರು ಹಿಂಪಡೆದಿರುವುದು ಆರ್ ಟಿಐಯಿಂದ ಬಹಿರಂಗವಾಗಿದೆ.
2008 -2009ರಲ್ಲಿ ಬಾಲಿವುಡ್ ಚಿತ್ರ ಜೋಧಾ ಅಕ್ಬರ್ ಮತ್ತು ಶಿವಾಜಿ ಹತ್ಯೆಯ ಕುರಿತ ಕಲಾವಿದನ ಚಿತ್ರದ ವಿರುದ್ಧ ಹಿಂಸಾತ್ಮಕ ಪ್ರತಿಭೆಟನೆಗೆ ಸಂಬಂಧಿಸಿದಂತೆ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಿಡೆ ಹಾಗೂ ಅವರ ಶಿವ್ ಪ್ರತಿಷ್ಠಾನ್ ಹಿಂದುಸ್ತಾನ್ ಸಂಘಟನೆಯ ವಿರುದ್ಧ ಆರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆ ಎಲ್ಲಾ ಪ್ರಕರಣಗಳನ್ನು ಮಹಾ ಸರ್ಕಾರ ಹಿಂಪಡೆದಿದೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿಡೆ ವಿರುದ್ಧದ ಪ್ರಕರಣ ಹಿಂಪಡೆದಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ ಎಸ್ಎಸ್ ಮಾಜಿ ಕಾರ್ಯಕರ್ತನಾಗಿರುವ ಸಂಭಾಜಿ ಭಿಡೆ ಶಿವ್ ಪ್ರತಿಷ್ಠಾನ್ ಹಿಂದುಸ್ತಾನ್ ಸಂಘಟನೆಯ ಮುಖ್ಯಸ್ಥನಾಗಿದ್ದು, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ಭಿಡೆ ವಿರುದ್ಧ ಸಾಂಗ್ಲಿಯಲ್ಲಿ ದಾಖಲಾಗಿದ್ದ ಹಳೆ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇದಕ್ಕು ಭೀಮಾ ಕೋರೆಗಾಂವ್ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಪುಣೆ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.
SCROLL FOR NEXT