ದೇಶ

ರಾಮ ಮಂದಿರ ನಿರ್ಮಿಸುವಂತೆ ಒತ್ತಾಯ : ಹಿಂದೂ ಸ್ವಾಮೀಜಿಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ !

Nagaraja AB

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ಒತ್ತಾಯಿಸಿ  ಹಿಂದೂ ಸ್ವಾಮೀಜಿಗಳ ಗುಂಪೊಂದು  ಇಂದಿನಿಂದ  ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಪಸ್ವಿ ಚಾವ್ನಿ ದೇವಾಲಯದ ಮಹಂತ ಸ್ವಾಮಿ ಪರಮಹಂಸ ದಾಸ್,  ರಾಮ ಮಂದಿರ ನಿರ್ಮಾಣ ಸಂಬಂಧ ಬಿಜೆಪಿ ಸರ್ಕಾರ ಕಾನೂನು ರೂಪಿಸಬೇಕು. ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಆಗಬೇಕು. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಾತನಾಡಿ ಮಂದಿರ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ   ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿರುವುದಾಗಿ ತಿಳಿಸಿದರು.

ಉಪವಾಸ  ಸತ್ಯಾಗ್ರಹ ಹಿನ್ನೆಲೆಯಲ್ಲಿ  ತಪಸ್ವಿ ಚಾವ್ನಿ ದೇವಾಲಯದಲ್ಲಿ ಸ್ವಾಮೀಜಿಗಳು ಶೈಲಾ ಪೂಜೆ ನೆರವೇರಿಸಿದ್ದಾರೆ.

ಇದಕ್ಕೂ ಮುನ್ನ ರಾಮ ಮಂದಿರ ಸ್ವಾಮೀಜಿಗಳ ಮುಖ್ಯಸ್ಥ ಅಚಾರ್ಯ ಸತ್ಯೇಂದ್ರ ದಾಸ್,  ರಾಮ ಮಂದಿರ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ವಿಫಲತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.

ಈ ಮಧ್ಯೆ ಅಯೋಧ್ಯ ವಿಚಾರ ಆದಷ್ಟು ಬೇಗ ಇತ್ಯರ್ಥವಾಗಲಿದೆ. ಈ ವಿವಾದದ ಇತ್ಯರ್ಥಕ್ಕಾಗಿ ದೇಶದ ಜನತೆಯೂ ಕಾಯುತ್ತಿದ್ದಾರೆ. ಸುಪ್ರೀಂಕೋರ್ಟ್  ರಾಮ ಮಂದಿರ ನಿರ್ಮಾಣ ಪರ ತೀರ್ಪು ನೀಡುವ ವಿಶ್ವಾಸ ವಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 29 ರಿಂದ ಸುಪ್ರೀಂಕೋರ್ಟ್ ನಲ್ಲಿ  ರಾಮ ಜನ್ಮ ಭೂಮಿ- ಬಾಬ್ರಿ ಮಸೀದಿಗೆ ಸಂಬಂಧಿಸಿದ ವಿಚಾರಣೆ ನಡೆಯಲಿದೆ.

SCROLL FOR NEXT