ದೇಶ

ನಿರುದ್ಯೋಗಿಗಳಿಗೆ 1000 ರು. ಮಾಸಿಕ ಭತ್ಯೆ ನೀಡುವ ಯೋಜನೆಗೆ ಆಂಧ್ರ ಸಿಎಂ ಚಾಲನೆ

Lingaraj Badiger
ಅಮರಾವತಿ: ನಿರುದ್ಯೋಗಿ ಯುವಕರಿಗೆ ಮಾಸಿಕ 1000 ರುಪಾಯಿ ನಿರುದ್ಯೋಗ ಭತ್ಯೆ ನೀಡುವ 'ಮುಖ್ಯಮಂತ್ರಿ ಯುವ ನೇಸ್ತಂ' ಯೋಜನೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಮಂಗಳವಾರ ಚಾಲನೆ ನೀಡಿದ್ದಾರೆ.
ಚಂದ್ರಬಾಬು ನಾಯ್ಡು ಅವರು ಇಂದು ಅಮರಾವತಿಯಲ್ಲಿ ಸಾಂಕೇತಿಕವಾಗಿ 400 ಯುವಕರಿಗೆ ನಿರುದ್ಯೋಗ ಭತ್ಯೆ ಪ್ರಮಾಣಪತ್ರಗಳನ್ನು ವಿತರಿಸುವ ಮೂಲಕ ಮುಖ್ಯಮಂತ್ರಿ ಯುವ ನೇಸ್ತಂ ಯೋಜನೆಗೆ ಚಾಲನೆ ನೀಡಿದರು.
ತೆಲುಗುದೇಶಂ ಪಕ್ಷ(ಟಿಡಿಪಿ) 2014ರ ವಿಧಾನಸಭೆ ಚುನಾವಣೆ ವೇಳೆ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ  ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೊನೆ ಅವಧಿಯಲ್ಲಿ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ಯೋಜನೆ ಅನ್ವಯ ನಿರುದ್ಯೋಗಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿಗಳನ್ನೂ ನೀಡಲಾಗುತ್ತದೆ. ಅಂದಾಜು 12 ಲಕ್ಷ ಯುವಕರು ನಿರುದ್ಯೋಗ ಭತ್ಯೆ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಆಂಧ್ರ ಸರ್ಕಾರ ಮಾಹಿತಿ ನೀಡಿದೆ.
SCROLL FOR NEXT