ತಿರುವನಂತಪುರಂ: ಕೇರಳದ ವಿಜಿಂಜಮ್ ಪೊಲೀಸರು ರೋಹಿಂಗ್ಯ ನಿರಾಶ್ರಿತರು ರಾಜ್ಯ ಪ್ರವೇಶಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಐದು ಸದಸ್ಯರ ರೋಹಿಂಗ್ಯ ಕುಟುಂಬವೊಂದನ್ನು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಹೈದರಾಬಾದ್ ನಿಂದ ಶಬರಿ ಎಕ್ಸ್ ಪ್ರೆಸ್ ಮೂಲಕ ವಿಜಿಂಜಮ್ ಆಗಮಿಸಿದ ರೋಹಿಂಗ್ಯ ವ್ಯಕ್ತಿ, ಆತನ ಪತ್ನಿ, ಆರು ತಿಂಗಳ ಮಗು ಹಾಗೂ ಇಬ್ಬರು ವಯಸ್ಕರನ್ನು ಕೇರಳ ಪೊಲೀಸರು ವಶಕ್ಕೆ ಪಡದಿದ್ದಾರೆ.
ಬಂಧಿತ ರೋಹಿಂಗ್ಯ ಕುಟುಂಬದ ಬಳಿ ವಿಶ್ವಸಂಸ್ಥೆಯ ಹೈಕಮಿಷನರ್ ನೀಡಿರುವ ನಿರಾಶ್ರಿತರ ಕಾರ್ಡ್ ಹೊಂದಿದ್ದು, ಅವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ ಎಂದು ವಿಜಿಂಜಮ್ ಪೊಲೀಸರು ತಿಳಿಸಿದ್ದಾರೆ.
"ಅವರು ಕುಟುಂಬ ಸಮೇತ ಬಂದಿದ್ದು, ಅವರನ್ನು ಪ್ರಶ್ನಿಸಿದಾಗ, ಹಣಕಾಸಿನ ತೊಂದರೆಯಿಂದಾಗಿ ಹೈದರಾಬಾದ್ ನಿಂದ ಕೇರಳಕ್ಕೆ ಪ್ರಯಾಣಿಸಿದ್ದಾರೆ. ಇಲ್ಲಿ ಹೆಚ್ಚು ಕೆಲಸ ಮಾಡಿ, ಹಣ ಸಂಪಾದಿಸಲು ಬಯಸಿದ್ದಾರೆ" ಎಂದು ರಾಜ್ಯ ವಿಶೇಷ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics