ದೇಶ

2014ರ ನಂತರ ಕ್ಷಿಪ್ರಗತಿಯಲ್ಲಿ ಗ್ರಾಮ ನೈರ್ಮಲೀಕರಣ: ಪ್ರಧಾನಿ ನರೇಂದ್ರ ಮೋದಿ

Nagaraja AB

ನವದೆಹಲಿ: 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷಿಪ್ರಗತಿಯಲ್ಲಿ ಗ್ರಾಮ  ನೈರ್ಮಲೀಕರಣ ವೇಗ ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಮಹಾತ್ಮಗಾಂಧಿ ಅವರ 150 ಜಯಂತಿ ಅಂಗವಾಗಿ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವಾಲಯದ ಆಯೋಜಿಸಿದ್ದ  ಅಂತಾರಾಷ್ಟ್ರೀಯ ನೈರ್ಮಲ್ಯ ಸಮಾವೇಶದಲ್ಲಿ  ಅವರು ಮಾತನಾಡುತ್ತಿದ್ದರು.
  2014ಕ್ಕೂ ಮುಂಚೆ ಶೇ, 34 ರಷ್ಟಿದ್ದ ಗ್ರಾಮ ನೈರ್ಮಲೀಕರಣ ಈಗ ಶೇ, 94ರಷ್ಟು ಹೆಚ್ಚಾಗಿದೆ. ಐದು ಲಕ್ಷ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತಗೊಂಡಿದ್ದು, ಅವರು, 25 ಕ್ಕೂ ಹೆಚ್ಚು ರಾಜ್ಯಗಳು ಬಯಲು ಬಹಿರ್ದೆಸೆಯಿಂದ ಮುಕ್ತಗೊಂಡಿರುವುದಾಗಿ ಘೋಷಿಸಿಕೊಂಡಿವೆ ಎಂದು ತಿಳಿಸಿದರು.
SCROLL FOR NEXT