ದೇಶ

ಮಹತ್ವದ ಪ್ರಕರಣಗಳ ತ್ವರಿತಗತಿಯ ವಿಚಾರಣೆಗೆ ಮೊದಲ ಆದ್ಯತೆ: ಗೊಗೋಯ್

Shilpa D
ನವದೆಹಲಿ: ಮಹತ್ವದ ಪ್ರಕರಣಗಳ ತ್ವರಿತಗತಿಯ ವಿಚಾರಣೆಗೆ ಮೊದಲ ಆದ್ಯತೆ ನೀಡುವುದಾಗಿ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ನ 46ನೇ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವತಚನ ಸ್ವೀಕರಿಸಿ ಮಾತನಾಡಿದ  ಅವರು ತ್ವರಿತಗತಿಯ ಪ್ರಕರಣಗಳ ವಿಚಾರಣೆಗೆ ಮೊದಲ ಆದ್ಯತೆ ನೀಡಲಾಗುವುದು, ಕೆಲವು ಮಾನದಂಡ ನಿಗಧಿ ಪಡಿಸುವವರೆಗೆ ಈ ವಿಧಾನ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ,
ನಿಗದಿ ಮಾನದಂಡಗಳ ಬಗ್ಗೆ ನಾವು ಕೆಲಸ ಮಾಡುತ್ತಿದ್ದು, ಅದು ಹೇಗೆ ನಡೆಯುತ್ತದೆ ಎಂಬುದನ್ನು ನೋಡುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ನಾಳೆಯೇ ಕೆಲವರು ಗಲ್ಲು ಶಿಕ್ಷೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿದು ಬಂದರೆ ಅಂತಹ ಕೇಸ್ ಗಳ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ  63 ವರ್ಷದ ರಂಜನ್ ಗೊಗೋಯ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನ ಬೋಧಿಸಿದರು, ಜಸ್ಟೀಸ್ ಗಗೋಯ್ ಅವರ ಅಧಿಕಾರವಧಿ13 ತಿಂಗಳಿದೆ. ಅಂದರೆ ನವೆಂಬರ್ 17 2019ಕ್ಕೆ ಅವರ ಸೇವಾವಧಿ ಇರಲಿದೆ.
SCROLL FOR NEXT