ಹಳಿಯೇ ಇಲ್ಲದೇ ರೈಲು ಬಿಟ್ಟ ಭಾರತೀಯ ರೈಲ್ವೆ ಇಲಾಖೆ! 
ದೇಶ

ಹಳಿಯೇ ಇಲ್ಲದೇ ರೈಲು ಸಂಚಾರ: ಕಾರ್ಯಾಚರಣೆಗೆ ರೈಲ್ವೆ ಇಲಾಖೆಯ ಪ್ರಯೋಗ!

ಕಂಬಿ ಇಲ್ಲದೇ ರೈಲು ಬಿಡೋದು ಅನ್ನೋದು ಇಷ್ಟು ದಿನ ತಮಾಷೆಯ ವಿಷಯವಾಗಿದ್ದು, ಅಫ್ಕೋರ್ಸ್ ಭಾರತದ ಮಟ್ಟಿಗೆ ಅಷ್ಟೇ.

ನವದೆಹಲಿ: ಕಂಬಿ ಇಲ್ಲದೇ ರೈಲು ಬಿಡೋದು ಅನ್ನೋದು ಇಷ್ಟು ದಿನ ತಮಾಷೆಯ ವಿಷಯವಾಗಿದ್ದು, ಅಫ್ಕೋರ್ಸ್ ಭಾರತದ ಮಟ್ಟಿಗೆ ಅಷ್ಟೇ. ಯುಕೆ, ಅಮೆರಿಕಾಗಳಲ್ಲಿ ಈ ಪರಿಕಲ್ಪನೆ 60 ರ ದಶಕದಲ್ಲೇ ಜಾರಿಯಲ್ಲಿತ್ತು. ಈಗ ಭಾರತದಲ್ಲೂ ಸಹ ಹಳಿಯೇ ಇಲ್ಲದೇ ರೈಲು ಚಾಲನೆ ಮಾಡುವ ಪ್ರಯೋಗ ಯಶಸ್ವಿಯಾಗಿದೆ. ಅಂದಹಾಗೆ ಇದಕ್ಕೆ ರೋಡ್ ರೈಲರ್ ರೈಲುಗಳೆನ್ನುತ್ತಾರೆ. 
ಸರಕು ಕಾರಿಡಾರ್ ಪ್ರಾರಂಭವಾಗುತ್ತಿದ್ದಂತೆಯೇ ಈ ರೀತಿಯ ರೋಡ್ ರೈಲರ್ ರೈಲುಗಳು ಹೆಚ್ಚಾಗುತ್ತದೆ ಎಂದು ದೈನಿಕ್ ಜಾಗರಣ್ ವರದಿ ಪ್ರಕಟಿಸಿದೆ. ದೇಶದ ಮೊದಲ ರೋಡ್ ರೈಲರ್ ಟ್ರೈನು ತಮಿಳುನಾಡಿನಿಂದ ಹರ್ಯಾಣ (ಪಲ್ವಾಯಿ) ಗೆ ತೆರಳಿದೆ.  ರೋಡ್ಡ್ ರೈಲರ್ ಗಳಲ್ಲಿನ ಬೋಗಿಗಳನ್ನು ಹಳಿಯ ಮೇಲೆ ಹಾಗೂ ನೆಲದ ಮೇಲೆ ಎರಡೂ ರೀತಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಚಲಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು 8 ಟ್ರಕ್ ಚಕ್ರಗಳು ಹಾಗೂ 4 ರೈಲು ಚಕ್ರಗಳನ್ನು ಹೊಂದಿದೆ. ಸರಕು ಸಾಗಣೆಯ ವಿಷಯದಲ್ಲಿ ರೋಡ್ ರೈಲರ್ ಗಳಿಂದಾಗಿ ಸಮಯ ಮತ್ತು ಹಣವನ್ನು ಹೆಚ್ಚು ಉಳಿತಾಯ ಮಾದಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel