ಟ್ರಂಪ್-ಮೋದಿ-ಪುಟಿನ್ 
ದೇಶ

ರಷ್ಯಾ ಜೊತೆ ಎಸ್-400 ಒಪ್ಪಂದ: ಮಿತ್ರ ರಾಷ್ಟ್ರ ಭಾರತದ ಮೇಲೆ ನಿರ್ಬಂಧ ಹೇರಿಕೆ ಅಸಾಧ್ಯ-ಅಮೆರಿಕ

ಅಮೆರಿಕ ಎಚ್ಚರಿಕೆಯ ಹೊರತಾಗಿಯೂ ರಷ್ಯಾ ಜೊತೆ ಭಾರತ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ನವದೆಹಲಿ: ರಷ್ಯಾ ಜೊತೆ ಕ್ಷಿಪಣಿ ವ್ಯವಸ್ಥೆ ಒಪ್ಪಂದಕ್ಕೆ ಮುಂದಾದರೆ ಭಾರತದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ ಎಂಬ ಅಮೆರಿಕ ಎಚ್ಚರಿಕೆಯ ಹೊರತಾಗಿಯೂ ರಷ್ಯಾ ಜೊತೆ ಭಾರತ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಅಮೆರಿಕ ನೀಡಿರುವ ಪ್ರತಿಕ್ರಿಯೆಯೂ ಅಚ್ಚರಿ ಮೂಡಿಸಿದೆ. 
ರಷ್ಯಾ-ಭಾರತದ ಒಪ್ಪಂದದ ನಂತರ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧಿಕಾರಿಗಳು, ರಕ್ಷಣಾತ್ಮಕ ಹೇಳಿಕೆ ನೀಡಿದ್ದು,  ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ನಮ್ಮ ಮಿತ್ರ ರಾಷ್ಟ್ರಗಳ ಸೇನಾ ಸಾಮರ್ಥ್ಯಕ್ಕೆ ಧಕ್ಕೆ ಉಂಟು ಮಾಡುವುದು ನಾವು ಹೇರುವ ನಿರ್ಬಂಧದ ಉದ್ದೇಶವಲ್ಲ, ಆದ್ದರಿಂದ ಈಗ ರಷ್ಯಾ ಜೊತೆ ಎಸ್-400 ಗೆ ಸಹಿ ಹಾಕಿರುವ ಭಾರತದ ಮೇಲೆ ನಾವು ಹಾಗೆಲ್ಲಾ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಕೆಡುಕುಂಟುಮಾಡುವ ರಷ್ಯಾದ ನಡವಳಿಕೆಗೆ ಅಂಕುಶ ಹಾಕುವುದು ನಮ್ಮ ಉದ್ದೇಶ, ಈ ಮೂಲಕ ರಷ್ಯಾಗೆ ಪಾಠ ಕಲಿಸುವುದು ನಿರ್ಬಂಧದ ಉದ್ದೇಶವಾಗಿದೆಯಷ್ಟೇ. ಹಾಗೆಂದ ಮಾತ್ರಕ್ಕೆ ರಷ್ಯಾ ಜೊತೆ ಒಪ್ಪಂದ ಮಾಡಿಕೊಳ್ಳುವ ನಮ್ಮ ಮಿತ್ರ ರಾಷ್ಟ್ರಗಳ ಸೇನಾ ಸಾಮರ್ಥ್ಯಕ್ಕೆ ಧಕ್ಕೆ ಉಂಟುಮಾಡುವುದು ನಮ್ಮ ಉದ್ದೇಶವಲ್ಲ ಎಂದು ಅಮೆರಿಕ ಭಾರತದೆಡೆಗಿನ ತನ್ನ ನಿಲುವನ್ನು ಬದಲಾವಣೆ ಮಾಡಿಕೊಂಡಿದೆ. 
ನಿರ್ಬಂಧ ವಿಧಿಸುವ ನಿರ್ಧಾರವನ್ನು ಪೂರ್ವಾಗ್ರಹವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಿಎಎಟಿಎಸ್ಎ ಸೆಕ್ಷನ್ 231 ರ ಪ್ರಕಾರ ನಿರ್ಬಂಧ ವಿಧಿಸುವುದನ್ನು ವಹಿವಾಟು-ವಹಿವಾಟು ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ರಷ್ಯಾ ರಕ್ಷಣಾ ಕ್ಷೇತ್ರಕ್ಕೆ ಹಣದ ಹರಿವನ್ನು ತಡೆಗಟ್ಟುವುದು ನಮ್ಮ ಉದ್ದೇಶ. ಆದ್ದರಿಂದ ನಾವು ರಷ್ಯಾದೊಂದಿಗೆ ಒಪ್ಪಂದಕ್ಕೆ ಮುಂದಾದ ನಮ್ಮ ಮಿತ್ರ ರಾಷ್ಟ್ರಗಳ ಮೇಲೆ ನಿರ್ಬಂಧ ವಿಧಿಸುವ ಪೂರ್ವಾಗ್ರಹದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ರಾಯಭಾರಿ ಕಚೇರಿ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಿಜೆಪಿ ಹೆದರಿಸಿ ನಮ್ಮ ಪಕ್ಷದ ಮೂವರು ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದೆ: BJP-JDU ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

ಬೆಂಗಳೂರಿನ ಎಲ್ಲ ರಸ್ತೆ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಿ: ಅಧಿಕಾರಿಗಳಿಗೆ ಸಿಎಂ ಸೂಚನೆ

Bengaluru: 'ಪರೀಕ್ಷೆ ನೆಪದಲ್ಲಿ ಮುತ್ತಿಟ್ಟು, ಬಟ್ಟೆ ಬಿಚ್ಚಲು ಒತ್ತಾಯಿಸಿದ ಡಾಕ್ಟರ್': ಯುವತಿ ದೂರು, ಬಂಧನ

Bengaluru's Diwali: 'ಬೆಳಕಿನ ಚಿತ್ತಾರ'ದಲ್ಲಿ ಝಗಮಗಿಸಿದ ಬೆಂಗಳೂರು, ಸ್ಟನ್ನಿಂಗ್ ವಿಡಿಯೋ, ಬೆರಗಾದ ನಿರ್ಮಲಾ ಸೀತಾರಾಮನ್!

ಭೀಕರ ಅಗ್ನಿ ಅವಘಡ: ಪಟಾಕಿ ಮಾರುಕಟ್ಟೆಗೆ ಬೆಂಕಿ, 70 ಅಂಗಡಿ ಭಸ್ಮ, 2 ಕಿ.ಮೀ ದೂರಕ್ಕೆ ಸ್ಫೋಟದ ಶಬ್ಧ! video

SCROLL FOR NEXT