ಬಾಲಕಿ ರಕ್ಷಣೆ ಚಿತ್ರ 
ದೇಶ

ರೈಲು ಬರುವ ಕೆಲವೇ ಸೆಕೆಂಡ್ ಅಂತರದಲ್ಲಿ ಹಳಿ ದಾಟುತ್ತಿದ್ದ ಬಾಲಕಿ ರಕ್ಷಿಸಿದ ಪೊಲೀಸ್ : ಸಿಸಿಟಿವಿಯಲ್ಲಿ ಸೆರೆ !

ಮುಂಬೈ ಸಮೀಪದ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ಬಾಲಕಿಯನ್ನು ರೈಲು ಬರುವ ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಪವಾಡ ಸದೃಶ್ಯ ರೂಪದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಕಾಪಾಡಿದ್ದಾರೆ.

ಮುಂಬೈ: ಮುಂಬೈ ಸಮೀಪದ  ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ಬಾಲಕಿಯನ್ನು ರೈಲು ಬರುವ ಕೆಲವೇ ಸೆಕೆಂಡ್ ಗಳ  ಅಂತರದಲ್ಲಿ  ಪವಾಡ ಸದೃಶ್ಯ ರೂಪದಲ್ಲಿ ಪೊಲೀಸರು ಕಾಪಾಡಿದ್ದಾರೆ.

ನವಿ ಮುಂಬೈಯ ಜುಹಿನಗರ್ ದಲ್ಲಿನ  ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಫ್ಲಾಟ್ ಪಾರ್ಮ್ ನಲ್ಲಿ ಇಳಿದ ಬಾಲಕಿ  ಎದುರಿನ ಪ್ಲಾಟ್ ಫಾರ್ಮ್ ಗೆ ತೆರಳಲು ಹಳಿ ದಾಟುತ್ತಿದ್ದಾಗ  ಇನ್ನೇನೂ ರೈಲು ಬಂದೇ ಬಿಟ್ಟಿತ್ತು ಎನ್ನುವಷ್ಟರಲ್ಲಿ ಬಾಲಕಿಯನ್ನು ಪೊಲೀಸ್ ಸಿಬ್ಬಂದಿಯೊಬ್ಬರು ರಕ್ಷಿಸಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಫ್ಲಾಟ್  ಪಾರ್ಮ್ ನಲ್ಲಿನ  ಬೆಂಚ್ ಮೇಲೆ ಕುಳಿತಿದ್ದ ಪೊಲೀಸ್  ಓಡೋಡಿ ಬಂದು  ಬಾಲಕಿ ಮೇಲೆ ಹತ್ತಲು ನೆರವಾಗಿದ್ದಾರೆ. ನಂತರ ರೈಲು ಸಂಚರಿಸಿದೆ.

ಕೆಲವು ದಿನಗಳ ಹಿಂದೆ ಮುಂಬೈ ರೈಲು ನಿಲ್ದಾಣದಲ್ಲಿ  17 ವರ್ಷದ ಬಾಲಕಿ ಇಂತಹುದೇ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದರು. ಆಕೆಯ ಟಿ ಶರ್ಟಿನಿಂದ ಸಹ ಪ್ರಯಾಣಿಕರು  ಆಕೆಯನ್ನು ಎಳೆದಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!