ಗುವಾಹಟಿ: ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ನಡೆದಾಡುತ್ತಾಳೊ ಅಂದೇ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಹೇಳಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಹುಟ್ಟುಹಬ್ಬದ ದಿನವೇ ಮುಸ್ಲಿಂ ಮಹಿಳೆಯನ್ನು ನಗ್ನಗೊಳಿಸಿ ನೀಚ ಕೃತ್ಯ ಎಸಗಿದ್ದಾರೆ.
ಅಸ್ಸಾಂನ ದುಬ್ರಿ ಜಿಲ್ಲೆಯಲ್ಲಿನ ಕುಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮಹಿಳೆ ತನ್ನ ಅಪ್ರಾಪ್ತ ಬಾಲಕನ ವಿವಾಹವನ್ನು ವಿರೋಧಿಸಿದ್ದಳು. ಇದಕ್ಕೆ ಮೂವರು ಮಹಿಳೆಯರು ಆಕೆಯನ್ನು ನಗ್ನಗೊಳಿಸಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
39 ವರ್ಷದ ರಶೀಮಾ ಬೀಬಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಮಾನಿಸಿ, ವಿಕೃತಿ ಮೆರೆದಿದ್ದಾರೆ. ಇದೆಲ್ಲಾ ವಿಡಿಯೋದಲ್ಲಿ ಸೆರೆಯಾಗಿದ್ದು ಈ ಸಂಬಂಧ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದರು.
ರಶೀಮಾರ ಎರಡನೇ ಪತಿ ಮಂತು ಶೇಕ್ ಸಂಬಂಧಿಕರು ಈ ನೀಚ ಕೃತ್ಯ ಎಸಗಿದ್ದಾರೆ. ರಶೀಮಾ ಮೂರನೇ ಮದುವೆಯಾಗಿ ಮೋನುಲ್ ಹಕ್ ಜೊತೆ ನೆಲೆಸಿದ್ದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ರಶೀಮಾ ಬಾಲ್ಯ ವಿವಾಹವನ್ನು ವಿರೋಧಿಸಿದ್ದರು. ಆಗ ದೊಡ್ಡ ಗಲಾಟೆಯಾಗಿ ಎರಡನೇ ಪತಿ ಮಂತು ಶೇಕ್ ಸಂಬಂಧಿಕರನ್ನು ಬಂಧಿಸಲಾಗಿದ್ದು ಅವರಿಗೆ ಜಾಮೀನು ಸಿಗದೇ ನ್ಯಾಯಾಂಗ ಬಂಧನದಲ್ಲಿದ್ದು ಇದರಿಂದ ಬೇಸರಗೊಂಡ ರಶೀಮಾರನ್ನು ಇದೀಗ ಅಕ್ಟೋಬರ್ 2ರಂದು ನಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.