ದೇಶ

2019ರ ಲೋಕಸಭೆ ಚುನಾವಣೆ; ಪಂಚರಾಜ್ಯಗಳ ಚುನಾವಣೆ ಸೆಮಿ ಫೈನಲ್

Sumana Upadhyaya

ನವದೆಹಲಿ: 2019ರ ಲೋಕಸಭೆ ಚುನಾವಣೆಗೆ ಛತ್ತೀಸ್ ಗಢ, ಮಧ್ಯ ಪ್ರದೇಶ, ಮಿಜೋರಮ್, ರಾಜಸ್ತಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಸೆಮಿ ಫೈನಲ್ ರೀತಿಯಾಗಿದೆ. ಈ ರಾಜ್ಯಗಳಲ್ಲಿ ನವೆಂಬರ್ 12ರಿಂದ ಡಿಸೆಂಬರ್ 7ರವರೆಗೆ ಚುನಾವಣೆ ನಡೆಯಲಿದ್ದು ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.

ಪಂಚ ರಾಜ್ಯಗಳ ಫಲಿತಾಂಶ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುತ್ತಾರೆಯೇ, ಮತ್ತೆ 2014ರ ಮ್ಯಾಜಿಕ್ ಮಾಡಲಿದ್ದಾರೆಯೇ ಎಂಬ ಬಗ್ಗೆ ಒಂದು ಚಿತ್ರಣ ನೀಡಲಿದೆ. ರಾಜ್ಯದಲ್ಲಿ ಪ್ರತಿಪಕ್ಷಗಳು ಅಷ್ಟೊಂದು ಬಲಿಷ್ಠವಾಗದಿರುವುದನ್ನು ತಮ್ಮ ಅನುಕೂಲಕ್ಕೆ ಪಡೆದುಕೊಳ್ಳಲು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬಯಸುತ್ತಿದ್ದರೆ, ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಮಾಯಾವತಿಯವರ ಬಿಎಸ್ ಪಿ ಸೆಣಸಲು ಸಜ್ಜಾಗಿದೆ.

ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ನ ಮಾಜಿ ಪ್ರಭಾವಿ ನಾಯಕ ಅಜಿತ್ ಜೋಗಿ ತಮ್ಮದೇ ಸ್ವಂತ ಜನತಾ ಕಾಂಗ್ರೆಸ್ ಸ್ಥಾಪಿಸಿದ ನಂತರ ಈ ಬಾರಿ ಅದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಐದು ರಾಜ್ಯಗಳಲ್ಲಿ 83 ಲೋಕಸಭಾ ಸ್ಥಾನಗಳಿದ್ದು ಇವುಗಳಲ್ಲಿ 2014ರಲ್ಲಿ ಬಿಜೆಪಿ 53 ಸ್ಥಾನಗಳನ್ನು ಗಳಿಸಿತ್ತು.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸ್ ಗಢದಲ್ಲಿ ರಮಣ್ ಸಿಂಗ್ ಅವರು ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗುವ ಹಠದಲ್ಲಿದ್ದರೆ ರಾಜಸ್ತಾನದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಸರ್ಕಾರ ಬದಲಾಗುತ್ತದೆ ಎಂಬ ಸಂಪ್ರದಾಯವನ್ನು ಮುರಿಯಲು ಯತ್ನಿಸುತ್ತಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ಅಥವಾ ಮುನ್ನಡೆಯಾದರೂ ಅದು ಮುಂದಿನ ವರ್ಷದ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

SCROLL FOR NEXT