ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರು ನೀಡಬಹುದಾದ ಉಚಿತ ಸಹಾಯವಾಣಿಗೆ ಲೈಂಗಿಕ ಸೇವೆಗೆ ಸಂಬಂಧಿಸಿದ ಕರೆಗಳು ಬರುವುದಲ್ಲದೇ, ಆಶ್ಲೀಲ ವಿಚಾರಕ್ಕೆ ಸಂಬಂಧ ಹುಡುಕಾಟದಲ್ಲಿ ಈ ನಂಬರ್ ಕಂಡುಬಂದಿರುವುದರಿಂದ ಅದನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಸಹಾಯವಾಣಿಯ ಸಂಖ್ಯೆಯನ್ನು ಕಾರ್ಯಾಚರಣೆಯಿಂದ ರದ್ದುಪಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಪರ್ಯಾಯ ಸಂಖ್ಯೆ ನೀಡಲಾಗುವುದು ಎಂದು ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಪ್ರತಿ ದಿನವೂ ಹಸಿ ಸುಳ್ಳು ಕರೆಗಳನ್ನು ಸ್ವೀಕರಿಸಲಾಗುತ್ತಿದೆ .ಹೀಗಾಗಿ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್ ಲೈನ್ ನಲ್ಲಿ ಆಶ್ಲೀಲ ವಿಷಯಕ್ಕೆ ಸಂಬಂಧಿಸಿದಂತೆ ಹುಡುಕಾಟ ನಡೆಸುತ್ತಿದ್ದಾಗ ಈ ಸಂಖ್ಯೆ ದೊರಕಿದ್ದು, ನಂತರ ಡಯಲ್ ಮಾಡಿದ್ದಾಗಿ ಕರೆದಾರರ ಕರೆದಾರರೊಂದಿಗೆ ಸಂಭಾಷಣೆಗಳನ್ನು ಆಧರಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಇಂತಹ ಪ್ರಕರಣಗಳಿಂದಾಗಿ ಚೈಲ್ಡ್ ಲೈನ್ 1098 ರ ಜೊತೆಗೆ ಹೆಚ್ಚುವರಿಯಾಗಿ ಪರ್ಯಾಯ ಸಂಖ್ಯೆಯನ್ನು ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.