ದೇಶ

ಮೆರವಣಿಗೆ ವೇಳೆ ಆನೆ ಮೇಲಿಂದ ಕೆಳಗೆ ಬಿದ್ದ ಅಸ್ಸಾಂ ಡೆಪ್ಯುಟಿ ಸ್ಪೀಕರ್, ವಿಡಿಯೋ ವೈರಲ್

Lingaraj Badiger
ಅಸ್ಸಾಂ: ಮೆರವಣಿಗೆ ವೇಳೆ ಅಸ್ಸಾಂ ನೂತನ ಡೆಪ್ಯುಟಿ ಸ್ಪೀಕರ್ ಕೃಪಾನಾಥ್ ಮಲ್ಲಾ ಅವರು ಆಯತಪ್ಪಿ ಆನೆ ಮೇಲಿಂದ ಕೆಳಗೆ ಬಿದ್ದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಅಕ್ಟೋಬರ್ 6ರಂದು ಈ ಘಟನೆ ನಡೆದಿದ್ದು, ಬಿಜೆಪಿ ಶಾಸಕರಾಗಿರುವ ಕೃಪಾನಾಥ್ ಅವರು ಕರೀಂಗಂಜ್ ಜಿಲ್ಲೆಯಲ್ಲಿರುವ ತಮ್ಮ ಸ್ವಕ್ಷೇತ್ರ ರಾತಾಬಾರಿಯಲ್ಲಿ ಅಭಿಮಾನಿಗಳು ಅವರಿಗೆ ಭವ್ಯ ಸ್ವಾಗತ ನೀಡಲು ಆನೆಯ ಮೇಲೆ ಕುಳ್ಳಿರಿಸಿದ್ದರು. 
ಆನೆ ಮೇಲೆ ಕೂರಿಸಿ ಮೆರವಣಿಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಆನೆಯಿಂದ ಕೆಳಗೆ ಬೀಳುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಉಪ ಸಭಾಧ್ಯಕ್ಷರಿಗೆ ಘಟನೆ ವೇಳೆ ಯಾವುದೇ ಗಾಯಗಳಾಗಿಲ್ಲ.
ಆನೆ ಮೇಲೆ ಕುಳಿತಿದ್ದ ಮಾವುತ ಕೂಡ ಕೃಪಾನಾಥರ ಜತೆ ಕೆಳಗೆ ಬಿದ್ದಿದ್ದು, ನೆರೆದಿದ್ದವರು ತಕ್ಷಣ ಕೃಪಾನಾಥ ಅವರ ಸಹಾಯಕ್ಕೆ ಮುಂದಾದರು.
SCROLL FOR NEXT