ದೇಶ

'ಬ್ರಹ್ಮೋಸ್' ಕ್ಷಿಪಣಿ ಮಾಹಿತಿ ಸೋರಿಕೆ: ಶಂಕಿತ ಪಾಕ್ ಐಎಸ್​​ಐ ಏಜೆಂಟ್ ಬಂಧನ

Raghavendra Adiga
ನಾಗ್ಪುರ್: ದೇಶದ ಪ್ರತಿಷ್ಠಿತ ಕ್ಶಿಪಣಿಗಳಲ್ಲಿ ಒಂದಾದ "ಬ್ರಹ್ಮೋಸ್ " ಕುರಿತ ತಾಂತ್ರಿಕ ಮಾಹಿತಿಗಳನ್ನು ನೆರೆಯ ವೈರಿ ಪಾಕಿಸ್ತಾನಕ್ಕೆ ಅಕ್ರಮವಾಗಿ ನೀಡುತ್ತಿದ್ದ ಶಂಕಿತ ಐಎಸ್​ಐ ಏಜೆಂಟ್ ಅನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಬಂಧಿಸಲಾಗಿದೆ.
ಬಂಧಿತನನ್ನು ನಿಶಾಂತ್ ಅಗರ್​ವಾಲ್ ಎಂದಯ ಗುರುತಿಸಿದ್ದು ನಾಗ್ಪುರದಲ್ಲಿನ  ಬ್ರಹ್ಮೋಸ್ ಏರೋಸ್ಪೇಸ್​​ ಘಟಕದಲ್ಲಿ ಈತ ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ವರದಿಗಳ ಪ್ರಕಾರ  ಅಗರ್​ವಾಲ್ ಪಾಕಿಸ್ತಾನದ ಗೂಢಚಾರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ನ ಶಂಕಿತ್ ಸದಸ್ಯನಾಗಿದ್ದಾನೆ.ಈಗ ಆರೋಪಿಯನ್ನು ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಶ್ವದ ಅತಿ ವೇಗವಾದ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಕುರಿತ ಸೂಕ್ಷ್ಮ ಮಾಹಿತಿಯನ್ನು ಆರೋಪಿಯು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದನೆಂದು ಆಂಗ್ಲ ಮಾದ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
SCROLL FOR NEXT