ಚೆನ್ನೈ: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಮಾನಹಾನಿ ಬರಹಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ನಕ್ಕೀರನ್ ಪತ್ರಿಕೆ ಪ್ರಕಾಶಕ ನಕ್ಕೀರನ್ ಗೋಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪುಣಗೆ ತೆರಳುತ್ತಿದ್ದ ಗೋಪಾಲ್ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ, ನಿಯತಕಾಲಿಕೆಯನ್ನು ಗೋಪಾಲ್ ತಮ್ಮ ಹೆಸರಿನಲ್ಲೇ ನಡೆಸುತ್ತಿದ್ದಾರೆ, ರಾಜ್ಯಪಾಲ ಪುರೋಹಿತ್ ಜೊತೆಗೆ ಮಧುರೈ ರಾಮರಾಜ ವಿವಿ ಸೆಕ್ಸ್ ಹಗರಣದಲ್ಲಿ ನಿರ್ಮಲಾ ದೇವಿ ಮತ್ತು ಪುರೋಹಿತ್ ಅವರನ್ನು ಆರೋಪಿಗಳನ್ನಾಗಿ ಚಿತ್ರಿಸಲಾಗಿತ್ತು.
ಮೂಲಗಳ ಪ್ರಕಾರ, ರಾಜ್ಯಪಾಲರ ವಿರುದ್ಧ ಮಾನಹಾನಿ ಬರಹ ಪ್ರಕಟಿಸಿದ್ದ ಗೋಪಾಲ್ ವಿರುದ್ಧ ಐಪಿಸಿ ಸೆಕ್ಷನ್ 124 ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಿರ್ಮಲಾ ದೇವಿ ಅರುಪ್ಪು ಕೊಟ್ಟಾಯಿ ಕಾಲೇಜಿನ ಸಹಾಯಕ ಪ್ರಾದ್ಯಾಪಕಿಯಾಗಿದ್ದು, ಮಧುರೈ ಕಾಮರಾಜ ವಿವಿ ಸೆಕ್ಸ್ ಹಗರಣದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ, ಪೊಲೀಸರ ವಿಚಾರಣೆ ವೇಳೆ ಆಕೆ ತಪ್ಪೊಪ್ಪೊಕೊಂಡಿದ್ದಾರೆ ಎಂದು ಹೇಳಲಾಗಿದೆ.