ಚೆನ್ನೈ: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಹಿರಿಯ ಪತ್ರಕರ್ತ ಹಾಗೂ ನಕ್ಕೀರನ್ ಪತ್ರಿಕೆ ಪ್ರಕಾಶಕ ನಕ್ಕೀರನ್ ಗೋಪಾಲ್ ಅವರಿಗೀಗ ಬಿಡುಗಡೆ ಸಿಕ್ಕಿದೆ. ಗೋಪಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಲಪಡಿಸಲು ತಮಿಳುನಾಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರಾಕರಿಸಿದೆ.
ಪುಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಮಿಳು ವಾರಪತ್ರಿಕೆಯ ಸಂಪಾದಕ ಗೋಪಾಲ್ ಅವರನ್ನು ಚೆನ್ನೈ ಪೋಲೀಸರು ಮಂಗಳವಾರ ಬಂಧಿಸಿದ್ದರು.ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರ ಬಂಧನವಾಗಿತ್ತು.
ಹಿರಿಯ ಪತ್ರಕರ್ತ ಆರ್.ಗೋಪಾಲ್ ಅವರು ನಕ್ಕೀರನ್ ಪತ್ರಿಕೆಯ ಮುಖ್ಯಸ್ಥರಾಗಿದ್ದು ರಾಜ ಭವನ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ರಾಜ್ಯಪಾಲ ಪುರೋಹಿತ್ ಜೊತೆಗೆ ಅರುಪ್ಪು ಕೊಟ್ಟಾಯಿ ಕಾಲೇಜಿನ ಸಹಾಯಕ ಪ್ರಾದ್ಯಾಪಕಿಯಾಗಿರುವ ನಿರ್ಮಲಾ ದೇವಿಯವರನ್ನು ಮಧುರೈ ರಾಮರಾಜ ವಿವಿ ಸೆಕ್ಸ್ ಹಗರಣದಲ್ಲಿ ಆರೋಪಿ ಎಂಬಂತೆ ಲೇಖನದಲ್ಲಿ ಬಿಂಬಿಸಲಾಗಿತ್ತು.
ನಿರ್ಮಲಾ ತಾವು ಇದಾಗಲೇ ಪೋಲೀಸ್ ವಶದಲ್ಲಿದ್ದು ಅವರು ತಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.