ಎಮ್.ಜಿ ಅಕ್ಬರ್ 
ದೇಶ

#MeToo: ಆರೋಪಗಳಿಗೆ ಉತ್ತರಿಸಿ ಇಲ್ಲವೇ ರಾಜೀನಾಮೆ ಸಲ್ಲಿಸಿ: ಎಂಜೆ ಅಕ್ಬರ್ ಗೆ ಕಾಂಗ್ರೆಸ್ ಆಗ್ರಹ

ಕೇಂದ್ರ ಸಚಿವ ಎಮ್.ಜಿ ಅಕ್ಬರ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು ಇದಕ್ಕೆ ಅವರು ತೃಪ್ತಿದಾಯಕವಾಗಿ ಉತ್ತರಿಸಬೇಕು ಇಲ್ಲವೇ ತಕ್ಷಣ ರಾಜೀನಾಮೆ ನೀಡಬೇಕು ಎಂದು.....

ನವದೆಹಲಿ: ಕೇಂದ್ರ ಸಚಿವ ಎಮ್.ಜಿ ಅಕ್ಬರ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು ಇದಕ್ಕೆ ಅವರು ತೃಪ್ತಿದಾಯಕವಾಗಿ ಉತ್ತರಿಸಬೇಕು ಇಲ್ಲವೇ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.
ಅಲ್ಲದೆ ಅಕ್ಬರ್ ತಮ್ಮ ವರ್ತನೆಯ ಸಂಬಂಧ ತನಿಖೆ ಎದುರಿಸಬೇಕು ಎಂದೂ ಪಕ್ಶವು ಕೇಳಿದೆ.
"ಮೀಟೂ" ಅಭಿಯಾನ ವೇಗ ಪಡೆದುಕೊಳ್ಳುತ್ತಿರುವಾಗಲೇ ಕೆಲ ಮಹಿಳೆಯರು ಮಾಜಿ ಸಂಪಾದಕ ಹಾಗೂ ಹಾಲಿ ವಿದೇಶಾಂಗ ವ್ಯವಹಾರ ಇಲಾಖೆ ರಾಜ್ಯ ಸಚಿವರಾಗಿರುವ ಅಕ್ಬರ್ ವಿರುದ್ಧ ದನಿ ಎತ್ತಿದ್ದಾರೆ. ಅಕ್ಬರ್ ಪತ್ರಕರ್ತರಾಗಿದ್ದ ವೇಳೆ ತಮಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಅವರು ದೂರಿದ್ದಾರೆ.
ಕಾಂಗ್ರೆಸ್ ವಕ್ತಾರ ಎಸ್. ಜೈಪಾಲ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ "ಎಮ್.ಜಿ ಅಕ್ಬರ್ತಮ್ಮ ಮೇಲಿನ ಆರೋಪಕ್ಕೆ ತೃಪ್ತಿದಾಯಕ ವಿವರಣೆಯನ್ನು ನೀಡಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ" ಎಂದರು.
"ಅವರೊಡನೆ ಕೆಲಸ ಮಾಡಿದ್ದ ಜವಾಬ್ದಾರಿಯುತ ಪತ್ರಕರ್ತರು ಇದೀಗ ಅವರ ವಿರುದ್ದವೇ ಎತ್ತಿರುವ ಆರೋಪಕ್ಕೆ ಸಚಿವರು ಹೇಗೆ ಪ್ರತಿಕ್ರಯಿಸದೆ ಹೋಗುತ್ತಾರೆ? ಸಚಿವರ ಈ ವರ್ತನೆ ಕುರಿತು ನಾವು ತನಿಖೆಗೆ ಆಗ್ರಹಿಸುತ್ತೇವೆ"
ಅದೇ ವೇಳೆ ಅಕ್ಬರ್ ವಿಚಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೌನವಾಗಿರುವುದೇಕೆ ಎಂದು ಸಹ ರೆಡ್ಡಿ ಪ್ರಶ್ನಿಸಿದ್ದು ಸುಷ್ಮಾ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅವರು ತಮ್ಮ ಅಧೀನ ಸಿಬ್ಬಂದಿಯ ಕುರಿತು ಪ್ರತಿಕ್ರಯಿಸಲು ಸಿದ್ದವಾಗಿಲ್ಲ ಎಂದು ಕಿಡಿ ಕಾರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!