ನವದೆಹಲಿ: ತಮಗಿರುವ ಅಗಾಧವಾದ ಇಂಗ್ಲೀಷ್ ಪಾಂಡಿತ್ಯದಿಂದಲೇ ಸುದ್ದಿಯಾಗುವ ಶಶಿ ತರೂರ್ ಇದೇ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ತಮ್ಮ ಪುಸ್ತಕದ ಬಗ್ಗೆ ಮಾತನಾಡುತ್ತ ಶಶಿ ತರೂರ್ ಇಂಗ್ಲೀಶ್ ಶಬ್ದವೊಂದನ್ನು ಪರಿಚಯಿಸಿದ್ದು, ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಎಂಬ ಪದದ ಅರ್ಥವನ್ನು ಇದೇ ಮೊದಲ ಬಾರಿಗೆ ಬಹುತೇಕ ಜನರು ತಿಳಿದುಕೊಳ್ಳಲು ಪ್ರಾರಂಭಿಸಿದ್ದಾರೆ.
ತಮ್ಮ ಹೊಸ ಪುಸ್ತಕದ ಬಗ್ಗೆ ಮಾತನಾಡುತ್ತಾ floccinaucinihilipilification ಎಂಬ ಪದ ಉಪಯೋಗಿಸಿರುವ ಶಶಿ ತರೂರ್, ಮತ್ತೊಮ್ಮೆ ಎಲ್ಲರೂ ನಿಘಂಟು ಹಿಡಿದು ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸವಾಗಿದೆ. 18 ನೇ ಶತಮಾನದಲ್ಲಿ ಈ ಪದ ಲ್ಯಾಟಿನ್ ನಿಂದ ಬಳಕೆಗೆ ಬಂದಿದ್ದು, ಅತಿ ಕಡಿಮೆ ಜನರು ಬಳಕೆ ಮಾಡುತ್ತಾರೆ.