ದೇಶ

ಆಪಲ್ ಉದ್ಯೋಗಿ ಹತ್ಯೆ: ಮೃತ ವಿವೇಕ್ ತಿವಾರಿ ಪತ್ನಿಗೆ ಸರ್ಕಾರಿ ಉದ್ಯೋಗ

Raghavendra Adiga
ಲಖನೌ: ಪೋಲೀಸರಿಂದಲೇ ಹತನಾದ ಆಪಲ್ ಉದ್ಯೋಗಿ ವಿವೇಕ್ ತಿವಾರಿಯ ಪತ್ನಿ ಕಲ್ಪನಾ ತಿವಾರಿಗೆ ಉತ್ತರ ಪ್ರದೇಶ ಸರ್ಕಾರ ಸರ್ಕಾರಿ ನೌಕರಿ ನೀಡಿದೆ. ತಿವಾರಿ ಪತ್ನಿ ಕಲ್ಪನಾ ಅವರಿಗೆ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ  ದಿನೇಶ್ ಶರ್ಮಾಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ನೀಡಿದರು.
ನೇಮಕಾತಿ ಪತ್ರ ಪಡೆದು  ಮಾತನಾಡಿದ  ಕಲ್ಪನಾ ತಿವಾರಿ "ತನಿಖೆಯು ಸರಿದಾರಿಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಇದುವರೆಗಿನ ತನಿಖೆ ಕುರಿತಂತೆ ನನಗೆ ತೃಪ್ತಿ ಇದೆ" ಎಂದಿದ್ದಾರೆ.
ಸೆಪ್ಟೆಂಬರ್ 29 ರಂದು ಆಪಲ್ ಉದ್ಯೋಗಿಯಾಗಿದ್ದ ವಿವೇಕ್ ತಿವಾರಿ ಅವರನ್ನು ರಾತ್ರಿ ತಪಾಸಣೆ ವೇಳೆ ಕಾರು ನಿಲ್ಲಿಸಲಿಲ್ಲ ಎನ್ನುವ ಕಾರಣಕ್ಕೆ ಪೊಲೀಸ್ ಪೇದೆಯು ಗುಂಡಿಕ್ಕಿ ಹತ್ಯೆ ಮಾಡಿದ್ದರು. ತಿವಾರಿ ಸಹೋದ್ಯೋಗಿ ಸನಾ ಖಾನ್ ಜತೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. 
ಪ್ರಕರಣ ಸಂಬಂಧ ಇಬ್ಬರು ಪೋಲೀಸ್ ಫೇದೆಗಳದ ಪ್ರಶಾಂತ್ ಚೌಧರಿ ಮತ್ತು ಸಂದೀಪ್ ಕುಮಾರ್ ಅವರನ್ನು ಬಂಧಿಸಲಾಗಿದೆ.
SCROLL FOR NEXT