ಸಾಂದರ್ಭಿಕ ಚಿತ್ರ 
ದೇಶ

ರಾಫೆಲ್ ಡೀಲ್: ರಿಲಯನ್ಸ್ ಜೊತೆಗಿನ ಒಪ್ಪಂದ ಶೇ.10ರಷ್ಟು ಮಾತ್ರ - ಡಸಾಲ್ಟ್ ಸಿಇಒ

36 ರಾಫೆಲ್‌ ಯುದ್ಧ ವಿಮಾನ ನಿರ್ಮಾಣಕ್ಕಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಯಲ್ಲಿ...

ನವದೆಹಲಿ: 36 ರಾಫೆಲ್‌ ಯುದ್ಧ ವಿಮಾನ ನಿರ್ಮಾಣಕ್ಕಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಯಲ್ಲಿ ಜಂಟಿ ಕಾರ್ಖಾನೆ ತೆರೆಯಲಾಗುತ್ತಿದೆ. ಆದರೆ, ರಾಫೆಲ್‌ ಡೀಲ್ ನಲ್ಲಿ ರಿಲಯನ್ಸ್  ಕೇವಲ ಶೇ. 10 ರಷ್ಟು ಮಾತ್ರ ಬಾಧ್ಯತೆ ಹೊಂದಿದೆ ಎಂದು ಡಸಾಲ್ಟ್ ಸಿಇಒ ಎರಿಕ್‌ ಟ್ರಾಪ್ಪಿಯರ್ ಅವರು ಹೇಳಿದ್ದಾರೆ. 
ಶೇ.10 ರಷ್ಟು ಬಾಧ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ನಾವು ರಿಲಯನ್ಸ್ ಜತೆ ಸೇರಿ ನಾಗ್ಪುರದಲ್ಲಿ ಜಂಟಿ ಕಾರ್ಖಾನೆ ಸ್ಥಾಪಿಸುತ್ತಿದ್ದೇವೆ. ಇದೇ ರೀತಿ, ನಾವು ಭಾರತದ ಸುಮಾರು 100 ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ. ಈ ಪೈಕಿ, ಈಗಾಗಲೇ 30 ಕಂಪನಿಗಳ ಜತೆ ಒಪ್ಪಂದವಾಗಿದೆ ಎಂದು ಏರಿಕ್ ತಿಳಿಸಿದ್ದಾರೆ.
'ಆಫ್‌ಸೆಟ್ಸ್‌ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತದ ಕಾನೂನಿನಲ್ಲಿ ಇರುವ ಷರತ್ತು. ಆದರೆ, ಭಾರತದ ಕಾನೂನಿನ ಪ್ರಕಾರ ಪಾಲುದಾರರನ್ನು ಆಯ್ಕೆ ಮಾಡುವ ಅಧಿಕಾರ ನಮಗೇ ಇರುತ್ತದೆ'. ಜತೆಗೆ, ಸದ್ಯ ರಫೇಲ್ ಡೀಲ್ ವಿಚಾರವಾಗಿ ರಾಜಕೀಯ ವಾದವಿವಾದ ನಡೆಯುತ್ತಿದ್ದರೂ ಸಹ ಭವಿಷ್ಯದ ಬಗ್ಗೆ ನಾವು ಆಶಾಭಾವನೆ ಹೊಂದಿದ್ದೇವೆ ಎಂದು ಡಸಾಲ್ಟ್ ಸಿಇಒ ಹೇಳಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಕಂಪನಿಗೆ ಯುದ್ಧ ವಿಮಾನ ತಯಾರಿಕೆಯ ಹೊಣೆ ವಹಿಸಲಾಗಿತ್ತು. ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗಾಗಿ ಭಾರತದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಪಾಲಿದಾರ ಕಂಪನಿಯನ್ನಾಗಿ ಡಸಾಲ್ಟ್ ಆರಿಸಿಕೊಂಡಿತ್ತು. ಆದರೆ ರಾಫೆಲ್ ಡೀಲ್ ನಲ್ಲಿ ಬಹುಕೋಟಿ ಅವ್ಯವಹಾರ ಸಂಭವಿಸಿದೆ, ಮತ್ತು ರಿಲಯನ್ಸ್ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಲು ಬೇಕೆಂದೇ ಫ್ರಾನ್ಸ್ ಮೇಲೆ ಒತ್ತಡ ಹೇರಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ